ಜೇಮ್ಸ್ ಬಾಂಡ್ ಆಗಿ ತೆರೆ ಮೇಲೆ ಬರಲಿದ್ದಾರೆ ಫಸ್ಟ್ ರ‍್ಯಾಂಕ್ ರಾಜು..!

ಕಿರಣ್ ಭರ್ತೂರ್ ಹಾಗೂ ಮಂಜುನಾಥ್ ವಿಶ್ವಕರ್ಮ ನಿರ್ಮಾಣದ, ದೀಪಕ್ ಮದುವನಹಳ್ಳಿ ನಿರ್ದೇಶನದ ಹಾಗೂ ಫಸ್ಟ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟನಾಗಿ ಮತ್ತು ಮೃದಲಾ ನಟಿಯಾಗಿ ಅಭಿನಯಿಸಿರುವಂತಹ ರಾಜು ಜೇಮ್ಸ್ ಬಾಂಡ್ ಚಿತ್ರದ ಫ್ರೀ ರಿಲೀಸ್ ಇವೆಂಟ್ ಅನ್ನು ಸದಾಶಿವನಗರದ ಹೈಡ್ ಪಾರ್ಕ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟಿ ರಮ್ಯಾ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿ ಪರಮೇಶ್ವರ್ ಸಮಾಜಕ್ಕೆ ಒಳ್ಳೆ ಸಂದೇಶಗಳನ್ನು ನೀಡುವಂತಹ ಚಿತ್ರಗಳನ್ನು ಕೊಡಿ. ಸಿನಿಮಾರಂಗ ಒಂದು ದೊಡ್ಡ ಮಾಧ್ಯಮವಾಗಿರುವುದರಿಂದ ಹೆಚ್ಚು ಸಮಾಜದ ಮೇಲೆ ಪರಿಣಾಮವನ್ನು ಬೀರುತ್ತದೆ. ಯಾವುದೇ ಪ್ರಚೋದನಾಕಾರಿ ಅಂಶವಿರುವ ಸಿನಿಮಾವನ್ನು ನೀಡಬೇಡಿ, ಎಂದು ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಶುಭ ಹಾರೈಸಿದರು.
ಮೊಹಕ ತಾರೆ ರಮ್ಯಾ ಮಾತನಾಡಿ ಫಸ್ಟ್ ರ‍್ಯಾಂಕ್ ರಾಜು ಸಿನಿಮಾವನ್ನು ನೋಡಿದ್ದೆ ಉತ್ತಮವಾಗಿ ಮೂಡಿಬಂದಿತ್ತು. ಈ ಸಿನಿಮಾ ಸಹ ಉತ್ತಮವಾಗಿ ಮೂಡಿ ಬರಲಿ, ಸಿನಿಮಾ ತಂಡ ಇನ್ನಷ್ಟು ಹೆಚ್ಚು ಸಿನಿಮಾಗಳನ್ನ ಮಾಡಲಿ ಎಂದು ಶುಭ ಕೋರಿದರು.
ನಿರ್ದೇಶಕರಾದ ದೀಪಕ್ ಮಧುವನ ಹಳ್ಳಿಯವರು ಮಾತನಾಡಿ ವಿಭಿನ್ನ ಪ್ರೇಮಕಥೆಯನ್ನು ಇಟ್ಕೊಂಡು ಮೂವಿ ಮಾಡಿದ್ದೇವೆ. ಫಸ್ಟ್ ರ‍್ಯಾಂಕ್ ರಾಜು ಮೂವಿಗೆ ಹೋಲಿಸಿದರೆ ಇದು ವಿಭಿನ್ನ ಕಥೆ. ಸಿನಿಮಾ ಇದೇ ಫೆಬ್ರವರಿ 14ರಂದು ರಿಲೀಸ್ ಆಗ್ತಾ ಇದ್ದು, ಹಿಂದಿ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಮೂಡಿ ಬರ್ತಾ ಇದೆ. ಎಲ್ಲರೂ ಸಿನಿಮಾವನ್ನು ನೋಡಿ ಬೆಂಬಲಿಸಬೇಕು. ಕನ್ನಡ ಸಿನಿಮಾಗಳನ್ನ ಹೆಚ್ಚು ಹೆಚ್ಚು ಬೆಂಬಲಿಸಿದಷ್ಟು ಸಿನಿಮಾಗಳು ಹೆಚ್ಚಾಗಿ ಬರುವುದಕ್ಕೆ ಸಾಧ್ಯವಾಗುತ್ತದೆ. ನಮಗೂ ಸಿನಿಮಾಗಳನ್ನ ಮಾಡುವುದಕ್ಕೆ ಬೆಂಬಲ ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಚಿಕ್ಕಣ್ಣ ಮಾತನಾಡಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಇದರಲ್ಲಿ ಹೀರೋನ ಫ್ರೆಂಡ್ ಆಗಿ ನಾನು ಅಭಿನಯಿಸಿದ್ದೇನೆ. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿರೊದು ತುಂಬಾ ಖುಷಿ ಕೊಟ್ಟಿದೆ ಎಂದು ತಮ್ಮ ಅನುಭವವನ್ನ ಹಂಚಿಕೊಂಡರು. ಇದರ ಜೊತೆಗೆ ಕಾರ್ಯಕ್ರಮದಲ್ಲಿ ತಬಲ ನಾಣಿ, ಚಂದನ್ ಶೆಟ್ಟಿ, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಸೇರಿ ಹಲವರು ಉಪಸ್ಥಿತರಿದ್ದರು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ