Blog
ನೂತನ ಮುಖ್ಯಮಂತ್ರಿ ಪಡೆದ ಜಾರ್ಖಂಡ್ ರಾಜ್ಯ.


ಕಳೆದ ಹಲವು ದಿನಗಳಿಂದ ಜಾರ್ಖಂಡ್ ರಾಜ್ಯ ರಾಜಕೀಯ ಡೋಲಾಯಮಾನ ಸ್ಥಿತಿಯಲ್ಲಿತ್ತು. ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಮತ್ತು ಬ್ರಷ್ಟಾಚಾರದ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಹೇಮಂತ್ ಸೊರೇನ್ ಅವರ ಬಂಧನದಿಂದ ಖಾಲಿಯಾಗಿದ್ದ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಮುಂದಿನ ರುವಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಖಾಲಿ ಸ್ಥಾನವನ್ನು ಈ ಹಿಂದೆ ಹೇಮಂತ್ ಸೊರೇನ್ ಅವರ ಸರ್ಕಾರದಲ್ಲಿ ಸಾರಿಗೆ ಸಚಿವ ಸ್ಥಾನವನ್ನು ನಿರ್ವಹಿಸುತ್ತಿದ್ದ ‘ಚಂಪೈ ಸೊರೇನ್’ ಅವರು ತುಂಬಿದ್ದಾರೆ. ಚಂಪೈ ಸೊರೇನ್ ಅವರನ್ನು ‘ಜಾರ್ಖಂಡಿನ ಹುಲಿ’ ಎಂದು ಕೂಡ ಕರೆಯುತ್ತಾರೆ. ಜಾರ್ಖಂಡ್ ರಾಜ್ಯ ಪ್ರತ್ಯೇಕವಾಗಲು ಹೋರಾಡಿದವರಲ್ಲಿ ಇವರು ಮುಂಚೂಣಿಯಲ್ಲಿದ್ದರು. 67 ವರ್ಷದ ಚಂಪೈ ಸೊರೇನ್ ಅವರು ಜಾರ್ಖಂಡ್ ರಾಜ್ಯದ 12ನೇ ಮುಖ್ಯಮಂತ್ರಿ ಆಗಿದ್ದಾರೆ.