ಜಿಯೋ ಹೊಸ ಪ್ಲ್ಯಾನ್ ಘೋಷಣೆ! ದೀಪಾವಳಿಗೆ 100ಜಿಬಿ ಕ್ಲೌಡ್ ಸ್ಟೋರೇಜ್ ಉಚಿತ…?!
ಮುಂಬೈ: ರಿಲಾಯನ್ಸ್ ಇಂಡಸ್ಟ್ರೀಸ್‌ನ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಮುಖೇಶ್ ಅಂಬಾನಿ ಹೊಸ ‘Jio AI-Cloud Welcome Offer’ ಅನ್ನು ಘೋಷಿಸಿದ್ದಾರೆ. “ಜಿಯೋ ಬಳಕೆದಾರರಿಗೆ ತಮ್ಮ ಫೋಟೋಗಳು, ವೀಡಿಯೊಗಳು, ದಾಖಲೆಗಳು, ಮತ್ತು ಎಲ್ಲಾ ಡಿಜಿಟಲ್ ವಿಷಯಗಳನ್ನು ಭದ್ರವಾಗಿ ಸಂಗ್ರಹಿಸಲು ಮತ್ತು ಪ್ರವೇಶ ಹೊಂದಲು 100ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಸಿಗಲಿದೆ,” ಎಂದು ಅಂಬಾನಿ ತಿಳಿಸಿದ್ದಾರೆ.
ಅಧಿಕ ಸ್ಟೋರೇಜ್ ಸೌಲಭ್ಯವಿರಲಿದೆಯೇ?
ಅಂಬಾನಿಯವರು ತಮ್ಮ ಭಾಷಣದಲ್ಲಿ “Jio AI-Cloud ಇಂದಿನ ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ದರಗಳನ್ನು ಹೊಂದಿರುತ್ತದೆ,” ಎಂದು ಹೇಳುವುದರ ಮೂಲಕ ಹೆಚ್ಚು ಸ್ಟೋರೇಜ್ ಬೇಕಾದವರಿಗೆ ಕಡಿಮೆ ದರದಲ್ಲಿ ಅವಕಾಶಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ದೀಪಾವಳಿಗೆ ಶುಭಾರಂಭ:
ಈ ಹೊಸ ಯೋಜನೆ ದೀಪಾವಳಿಯಂದೇ ಪ್ರಾರಂಭವಾಗಲಿದ್ದು, ಇದು ಎಲ್ಲರಿಗೂ ಪ್ರಬಲ ಹಾಗೂ ಅಗ್ಗದ ದರದಲ್ಲಿ ಕ್ಲೌಡ್ ಡೇಟಾ ಸ್ಟೋರೇಜ್ ಮತ್ತು ಡೇಟಾ ಪವರ್ಡ್ AI ಸೇವೆಗಳು ಸಿಗುವಂತೆ ಮಾಡಲು ಉದ್ದೇಶಿಸಿದೆ. ಇದು ಜಿಯೋ ಬಳಕೆದಾರರಿಗೆ ದೊಡ್ಡ ಅನುಕೂಲವನ್ನು ತರುವಂತೆ ತೋರುತ್ತಿದೆ.
ಸಾಧ್ಯತೆ ಮತ್ತು ಸವಾಲುಗಳು:
ಈ ಹೊಸ ಪ್ಲ್ಯಾನ್ ಜಿಯೋ ಬಳಕೆದಾರರಿಗೆ ಹೊಸ ಆವಕಾಶಗಳನ್ನು ಒದಗಿಸುತ್ತಿದ್ದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಚಟುವಟಿಕೆಗಳಿಗೆ ಕಾರಣವಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. Jio AI-Cloud ಪ್ರಾರಂಭವಾದಾಗ ಇದು ಏನೆಲ್ಲಾ ಅವಕಾಶಗಳನ್ನು ನೀಡುತ್ತದೆಯೆಂದು ನೋಡೋಣ.