
ನವದೆಹಲಿ: ಸದಾ ವಿವಾದಾತ್ಮಕ ಘಟನೆಗಳಿಂದ ಖ್ಯಾತಿ ಪಡೆದಂತಹ, ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಸ್ಥಾಪಿತವಾದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಅಧ್ಯಕ್ಷೀಯ ಚುನಾವಣೆ ನಡೆದಿದ್ದು, ‘ಯುನೈಟೆಡ್ ಲೆಫ್ಟ್’ ವಿಧ್ಯಾರ್ಥಿ ಒಕ್ಕೂಟ, ನಾಲ್ಕು ಸೆಂಟ್ರಲ್ ಸೀಟುಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
1996ರ ಬಳಿಕ ಮೊದಲ ಬಾರಿಗೆ ಒಬ್ಬ ದಲಿತ ಅಧ್ಯಕ್ಷರನ್ನು ಪಡೆದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ. ಬಿಹಾರ ಮೂಲದ ಧನಂಜಯ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯಾಗಿದ್ದು, ಎರಡು ದಶಕಗಳ ನಂತರ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನವಹಿಸಿದ ದಲಿತ ವಿದ್ಯಾರ್ಥಿ ಎನ್ನಿಸಿಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್‌ಎಸ್‌ಎಸ್ ಬೆಂಬಲಿತ ಎಬಿವಿಪಿಯ ಉಮೇಶ್ ಚಂದ್ರ ಅಜ್ಮೀರಾ 1676 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಎಐಎಸ್ಎ ಒಕ್ಕೂಟದ ಧನಂಜಯ್ ಅವರು 2598 ಮತಗಳೊಂದಿಗೆ ವಿಜಯವನ್ನು ಸಾಧಿಸಿದರು. ಇದರೊಂದಿಗೆ ಉಪಾಧ್ಯಕ್ಷ ಸ್ಥಾನ, ಜನರಲ್ ಸೆಕ್ರೆಟರಿ ಸ್ಥಾನ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳು ಎಡಪಂಥೀಯ ಪಕ್ಷಗಳ ಬೆಂಬಲದ ಯುನೈಟೆಡ್ ಲೆಫ್ಟ್‌ನ ಪಾಲಾಯಿತು.