CinemaEntertainment

ಜಾಲಿವುಡ್‌ ಸ್ಟುಡಿಯೋ: ದ್ವಿತೀಯ ವರ್ಷಕ್ಕೆ ಅದ್ದೂರಿಯಾಗಿ ಪಾದಾರ್ಪಣೆ.

ಬೆಂಗಳೂರು: ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಜಾಲಿವುಡ್‌ ಒಂದು ವರ್ಷದ ಯಶಸ್ವಿ ಪಯಣವನ್ನು ಪೂರೈಸಿದ್ದು, ದಸರಾ ಹಬ್ಬದ ಜೊತೆಗೆ ತನ್ನ ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು. ಜಾಲಿವುಡ್‌ ಸಂಸ್ಥೆಯು ಈ ಒಂದು ವರ್ಷದ ಅವಧಿಯಲ್ಲಿ 15 ತಮಿಳು ಸಿನಿಮಾಗಳನ್ನು ನಿರ್ಮಿಸಿ, ಹೊಸ ಮಟ್ಟದಲ್ಲಿ ಸಾಧನೆ ಮಾಡಿದೆ.

ಡಾ. ಐಸಿರಿ ಕೆ. ಗಣೇಶ್ ಅವರ ಮಾರ್ಗದರ್ಶನದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ಮತ್ತು ಮನರಂಜನೆಯಲ್ಲಿ ಹೆಚ್ಚು ಗಮನ ಹರಿಸಿ, ಸ್ಥಳೀಯರಿಗೆ ಉದ್ಯೋಗ ನೀಡಲು ಹೆಚ್ಚಿನ ಆದ್ಯತೆ ನೀಡಿದೆ.

ಅದ್ದೂರಿ ಕಾರ್ಯಕ್ರಮಗಳು:

ಜಾಲಿವುಡ್‌ ಸ್ಥಳೀಯ ಮುಖ್ಯಸ್ಥ ಬಷೀರ್‌ ಅಹಮದ್‌, ಈ ಒಂದು ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಜಾಲಿವುಡ್‌ಗೆ ಭೇಟಿ ನೀಡಿದ್ದು, ಜನರ ಸಹಕಾರದಿಂದ ಸಂಸ್ಥೆ ಯಶಸ್ಸು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ರಮಣ್ ಕುಮಾರ್ ಅವರು, ಬೆಂಗಳೂರಿನ ಶಾಲೆಗಳ ಸುಮಾರು 2-2.5 ಲಕ್ಷ ಮಕ್ಕಳು ಜಾಲಿವುಡ್‌ಗೆ ಭೇಟಿ ನೀಡಿದರ ಮಾಹಿತಿ ಹಂಚಿಕೊಂಡರು. ಕಾರ್ಪೊರೇಟ್‌ ಕಂಪನಿಗಳಿಂದ ಸಹ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ನೂತನ ಯೋಜನೆಗಳು:

ನವರಸನ್‌, ಜಾಲಿವುಡ್‌ನ ಪ್ರಮೋಷನಲ್‌ ಪಾರ್ಟ್‌ನರ್‌ ಮಾತಿನ ಪ್ರಕಾರ, ಸದ್ಯಕ್ಕೆ ಮೆಟ್ರೋ ರೈಲು ಚಿತ್ರೀಕರಣ ಸೇರಿ ಎರಡು ಹೊಸ ಯೋಜನೆಗಳನ್ನು ಜಾಲಿವುಡ್‌ನಲ್ಲಿ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಮನರಂಜನೆಗೆ ಹೆಚ್ಚಿನ ಆದ್ಯತೆ:

ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಮಾನ್ಯ ದಿನಗಳಲ್ಲಿ ಟಿಕೆಟ್‌ ದರ ₹999 ಮತ್ತು ವಾರಾಂತ್ಯಗಳಲ್ಲಿ ₹1199 ನಿಗದಿಯಾಗಿದೆ. ಜೊತೆಗೆ, ಜಾಲಿವುಡ್‌ ಸಂಸ್ಥೆಯು ಪ್ರತಿ ವರ್ಷ ಅತ್ಯುತ್ತಮ ಚಿತ್ರಕಲೆ ಪ್ರಶಸ್ತಿ ನೀಡುವ ಉದ್ದೇಶವನ್ನು ಹೊಂದಿದೆ.

ಜಾಲಿವುಡ್‌ ಪ್ರಚಾರಕ ಪಿಆರ್ ಓ ವೆಂಕಟೇಶ್ ಅವರು, ಜಾಲಿವುಡ್‌ ಒಂದು ವರ್ಷ ಪೂರೈಸಿದನ್ನು ಸಂಭ್ರಮಿಸಿದರು ಮತ್ತು ಮುಂದಿನ ಯೋಜನೆಗಳಿಗೂ ಯಶಸ್ಸು ತಂದುಕೊಡುವಂತೆ ಆಶಿಸಿದರು.

Show More

Leave a Reply

Your email address will not be published. Required fields are marked *

Related Articles

Back to top button