India

ಸಮಾಜ ಸುಧಾರಕ ಶ್ರೀ. ಜ್ಯೋತಿಬಾ ಫುಲೆ

ನವದೆಹಲಿ: ಸಾಮಾಜಿಕ ಪಿಡುಗಾಗಿದ್ದ ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಸಮಾಜದಲ್ಲಿ ಸಮಾನತೆ ತರಲು ಹಲವಾರು ಆಂದೋಲನಗಳನ್ನು ಹಮ್ಮಿಕೊಳ್ಳುವ ಮೂಲಕ, ಇಂದು ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಹೆಸರನ್ನು ನಿರ್ಮಿಸಿಕೊಂಡ, ಶ್ರೀ. ಜ್ಯೋತಿಬಾ ಫುಲೆ ಅವರ ಜನ್ಮದಿನ ಇಂದು. ಫುಲೆಯವರು ದಿನಾಂಕ: 11.04.1827ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು.

‘ಸತ್ಯಶೋಧಕ ಸಮಾಜ’ ಎಂಬ ಸಮಾನಮನಸ್ಕರ ಗುಂಪನ್ನು ಸೃಷ್ಟಿಸಿದ ಫುಲೆಯವರು, ತಮ್ಮ ಜೀವನದುದ್ದಕ್ಕೂ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಇವರ ಪತ್ನಿ ಶ್ರೀಮತಿ. ಸಾವಿತ್ರಿ ಬಾಯಿ ಫುಲೆ ಅವರು ಸಹ ಇವರಿಗೆ ಆಧಾರವಾಗಿ ನಿಂತಿದ್ದರು.

ಇವರಿಗೆ 1888ರಲ್ಲಿ ಮುಂಬೈ (ಆಗಿನ ಬಾಂಬೆ) ಅಲ್ಲಿ ನಡೆದ ಒಂದು ಸಮಾರಂಭದಲ್ಲಿ, ‘ಮಹಾತ್ಮ’ ಎಂಬ ಬಿರುದು ನೀಡಿದರು. ಇವರು ಮರಾಠಿ ಭಾಷೆಯ ಲೇಖಕರು ಸಹ ಆಗಿದ್ದರು. ಫುಲೆಯವರು ತಮ್ಮ 63ನೇ‌ ವಯಸ್ಸಿನಲ್ಲಿ, ದಿನಾಂಕ: 28.11.1890ರಲ್ಲಿ ಮರಣವನ್ನು ಹೊಂದಿದರು.

ಇವರ ಜನ್ಮದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವಾರು ಗಣ್ಯರು, ಅವರ ಸಮಾಜ ಸೇವೆಯನ್ನು ಮೆಲುಕು ಹಾಕಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button