Sports
ಹೊಸ ದಾಖಲೆ ಸೃಷ್ಟಿಸಿದ ಕಾಮ್ಯ.
ನವದೆಹಲಿ: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಲು ವರ್ಷದಿಂದ ವರ್ಷಕ್ಕೆ ಸಾವಿರಾರು ಸಾಹಸಿಗರು ಮುಂದೆ ಬರುತ್ತಾರೆ. ಆದರೆ ಅವುಗಳಲ್ಲಿ ಕೆಲವಷ್ಟೇ ಜನರು ಸಾಧನೆ ಮಾಡುತ್ತಾರೆ.
ಅದೇ ರೀತಿ ಮುಂಬೈನಲ್ಲಿ ಇರುವ ನೇವಿ ಚಿಲ್ಡ್ರನ್ಸ್ ಸ್ಕೂಲ್‌ನ ವಿದ್ಯಾರ್ಥಿ, 16 ವರ್ಷದ ಕಾಮ್ಯ ಕಾರ್ತಿಕೇಯನ್ ಅವರು ಮೌಂಟ್ ಎವರೆಸ್ಟ್ ತುತ್ತ ತುದಿಯನ್ನು ತಲುಪುವ ಮೂಲಕ, ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಅತ್ಯಂತ ಕಡಿಮೆ ವಯಸ್ಸಿನ ಭಾರತೀಯೆ ಎಂದು ಖ್ಯಾತ ಪಡೆದಿದ್ದಾಳೆ.
ಇವರು ತಂದೆ ಎಸ್. ಕಾರ್ತಿಕೇಯನ್ ಅವರು ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದಾರೆ. ತಂದೆ ಹಾಗೂ ಮಗಳು ಇಬ್ಬರೂ ಮೇ.20 ರಂದು ಈ ಸಾಧನೆ ಮಾಡಿದ್ದಾರೆ.