CinemaEntertainment
ಕಳ್ಳತನ ಮಾಡಿದ್ರಾ ಕಲ್ಕಿ ತಂಡ?

ಹೈದರಾಬಾದ್: ಭಾರತೀಯ ಸಿನೆಮಾ ಅಭಿಮಾನಿಗಳು ಅನೇಕ ತಿಂಗಳುಗಳಿಂದ ನೋಡಲು ಕಾದು ಕುಳಿತಿದ್ದ, ನಟರಾದ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ನಟಿಯರಾದ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಹಾಗೂ ಇನ್ನಿತರ ಮೇರು ಕಲಾವಿದರು ನಟಿಸಿರುವ ಕಲ್ಕಿ 2898 ಚಿತ್ರದ ಟೈಟಲ್ ಹೊರಬಂದಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ ಈ ತಂಡದ ಮೇಲೆ ಈಗ ಒಂದು ಗಂಭೀರ ಆರೋಪ ಕೇಳಿಬಂದಿದೆ.

ಕೋರಿಯನ್ ಕಲಾವಿದರೊಬ್ಬರ ಆರ್ಟ್‌ನ್ನು ಕದ್ದು ತಮ್ಮ ಚಿತ್ರಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಕಲ್ಕಿ 2898 ಎಡಿ ತಂಡ ಗುರಿಯಾಗಿದೆ. ಇಷ್ಟೇ ಅಲ್ಲದೆ ಹಾಲಿವುಡ್ ಚಿತ್ರಗಳಾದ ಡೂನ್, ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಗಳಂತಹ ಹಿಟ್ ಚಿತ್ರಗಳಿಂದ ಸಹ ಆರ್ಟ್ ಗಳನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಆರೋಪಗಳ ಕುರಿತು ಈ ಚಿತ್ರದ ನಿರ್ದೇಶಕರಾದ ನಾಗ ಅಶ್ವಿನ್ ಅವರ ಪ್ರತಿಕ್ರಿಯೆಗೆ ಎಲ್ಲರೂ ಕಾಯುತ್ತಿದ್ದಾರೆ.