Politics
ಕಂಗನಾಗೆ ಕಪಾಳಮೋಕ್ಷ.
ಚಂಡೀಗಢ: ಬಾಲಿವುಡ್ ನಟಿ ಹಾಗೂ ಉತ್ತರಾಖಂಡ್ ರಾಜ್ಯದ ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಕಂಗನಾ ರಾಣಾವತ್ ಅವರಿಗೆ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅದಿಕಾರ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಇಂದು ಮಧ್ಯಾಹ್ನ 3:30 ಕ್ಕೆ ಘಟಿಸಿದೆ. ಕಂಗನಾ ರಾಣಾವತ್ ಅವರ ಪಂಜಾಬ್ ರೈತರ ಹೋರಾಟದ ಕುರಿತ ಟಿಪ್ಪಣಿಯಿಂದ ಕುಪಿತಗೊಂಡ ಸಿಐಎಸ್‌ಎಫ್ ಮಹಿಳಾ ಅಧಿಕಾರಿ ಕುಲ್ವಿಂದರ್ ಕೌರ್ ಅವರು ರಾಣಾವತ್ ಕೆನ್ನೆ ಬಿಸಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಇನ್ನಷ್ಟು ತನಿಖೆಯಾಗುವ ಅಗತ್ಯವಿದೆ.
ಈ ಘಟನೆ ನಡೆಯುವುದಕ್ಕೂ ಮೊದಲು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, “ಮಂಡಿ ಸಂಸದೆ, ಸಂಸತ್ತಿಗೆ ತೆರಳುತ್ತಿದ್ದಾರೆ.” ಎಂದು ಹೇಳಿಕೊಂಡಿದ್ದರು. ಕಂಗನಾ ಅವರು 2024ರ ಲೋಕಸಭೆ ಚುನಾವಣೆಯಲ್ಲಿ 74,755 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.