ಬಾಲಿವುಡ್ನ್ನು ತರಾಟೆಗೆ ತೆಗೆದುಕೊಂಡ ಕಂಗನಾ.
ಮುಂಬೈ: ನಿನ್ನೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಪ್ರಸ್ತುತ ಮಂಡಿ ಲೋಕಸಭೆಯ ಸಂಸದೆ ಕಂಗನಾ ರಾಣಾವತ್ ಅವರ ಮೇಲಾದ ಹಲ್ಲೆಯ ಘಟನೆ, ದೇಶದಲ್ಲಿ ಭದ್ರತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ. ರಾಜಕೀಯ ಪ್ರೇರಿತ ರೈತರ ಆಂದೋಲನಕ್ಕೆ ಒಬ್ಬ ಕರ್ತವ್ಯ ನಿರತ ಸಿಐಎಸ್ಎಫ್ ಮಹಿಳಾ ಕರ್ಮಚಾರಿ ಬೆಂಬಲಿಸಿ, ಒಬ್ಬ ಮಹಿಳಾ ಸಂಸದೆಯ ಮೇಲೆ ಹಲ್ಲೆ ಮಾಡುತ್ತಾರೆ ಎಂದಾದರೆ, ಇಂದಿರಾಗಾಂಧಿ ಅವರ ಹತ್ಯೆಯ ಕಹಿ ನೆನಪುಗಳು ಮತ್ತೆ ಮರುಕಳಿಸುತ್ತದೆ.
ಹಲ್ಲೆಗೊಳಗಾದ ಕಂಗನಾ ರಾಣಾವತ್ ಅವರು ಇಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ. “ರಫಾ ಪರವಾಗಿ ಧ್ವನಿ ಎತ್ತಿದ್ದ ಬಾಲಿವುಡ್ ನಟ ನಟಿಯರು ನಿನ್ನೆ ನಡೆದ ಘಟನೆ ವಿರುದ್ಧ ಯಾಕೆ ಮಾತನಾಡಲಿಲ್ಲ. ನನ್ನೊಂದಿಗೆ ಆಗಿರುವ ಈ ಭಯಾನಕ ಘಟನೆ ಮುಂದೆ ನಿಮ್ಮೊಂದಿಗೆ ಕೂಡ ಆಗಲಿದೆ.” ಎಂದು ಹೇಳಿಕೊಂಡಿದ್ದಾರೆ.
ಇದರೊಂದಿಗೆ ತಮ್ಮ ಮುಂದಿನ ಚಿತ್ರ ‘ಎಮರ್ಜನ್ಸಿ’ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. ಹೇಗೆ ಒಬ್ಬ ವೃದ್ಧ ಒಂಟಿ ಮಹಿಳೆಯನ್ನು ಅವರದೇ ಬಾಡಿಗಾರ್ಡ್ಗಳು ಗುಂಡು ಹಾರಿಸಿ ಕೊಂದರು ಎಂಬ ಬಗ್ಗೆ ಈ ಚಿತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.