CinemaEntertainment
ಕನ್ನಡ ಫಿಲ್ಮಿಂ ಕ್ಲಬ್ ಸಂಸ್ಥಾಪಕ ಧೀರಜ್ ಎಂ.ವಿ: ಈಗ ಹೊಸ ಅವತಾರದಲ್ಲಿ..?!
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಕನ್ನಡ ಫಿಲ್ಮಿಂ ಕ್ಲಬ್‌ನ ಸಂಸ್ಥಾಪಕ ಧೀರಜ್ ಎಂ.ವಿ ಈಗ ನಿರ್ದೇಶಕರಾಗಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
ಕನ್ನಡ ಚಿತ್ರಗಳ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುವ ಧೀರಜ್ ಎಂ.ವಿ, ಈಗ ಸ್ವತಃ ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೊದಲ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ವೈಭವವಾಗಿ ನಡೆದಿದೆ.
ಈ ಚಿತ್ರಕ್ಕೆ ಅರ್ಜುನ್ ಗೌಡ ವಿ ಎಸ್ ಕೆ ಸಿನಿಮಾಸ್ ಬ್ಯಾನರ್‌ನಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ಯುವ ನಿರ್ದೇಶಕರು ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಇದರಲ್ಲಿ ಮಹೇಶ್ ಗೌಡ, ಪ್ರದೀಪ್ ಶಾಸ್ತ್ರಿ, ರೋಷನ್, ರಂಗ ಮತ್ತು ಶಶಾಂಕ್ ಸೋಘಲ್ ಮುಖ್ಯರು.
ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.