ಪ್ರಯಾಗರಾಜ್ನಲ್ಲಿ ಪರದಾಡಿದ ಕನ್ನಡಿಗರು: ಬೆಂಗಳೂರು ವಿಮಾನ ವಿಳಂಬದಿಂದ ಹೈರಾಣ!

ಪ್ರಯಾಗರಾಜ್: ಪ್ರಯಾಗರಾಜ್ ನಿಂದ ಬೆಂಗಳೂರಿಗೆ ಹೊರಡಬೇಕಾದ ಸ್ಪೈಸ್ ಜೆಟ್ ವಿಮಾನದ ಪ್ರಯಾಣಿಕರು ಇಂದು ವಿಮಾನ ನಿಲ್ದಾಣದಲ್ಲಿ ದೀರ್ಘ ಕಾಲದ ತೊಂದರೆ ಅನುಭವಿಸಿದರು. ಮಧ್ಯಾಹ್ನ 2:10ಕ್ಕೆ ಹಾರಬೇಕಾದ ವಿಮಾನ, ಮೊದಲಿಗೆ 6:25ಕ್ಕೆ ವಿಳಂಬವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಸಿಕ್ಕ ಮಾಹಿತಿ ಪ್ರಕಾರ, ಈ ವಿಮಾನ ರಾತ್ರಿ 8:00ಕ್ಕೆ ಟೇಕ್ ಆಫ್ ಆಗಲಿದೆ.

ಪ್ರಯಾಣಿಕರ ಪರದಾಟ:
ವಿಳಂಬಿತವಾಗಿರುವ ಸಮಯದ ಹೊಣೆ ಹೊತ್ತಿರುವ ಸ್ಪೈಸ್ ಜೆಟ್, ಪ್ರಯಾಣಿಕರಿಗೆ ಕೇವಲ ಹುರಿದ ಶೇಂಗಾ ಮತ್ತು ಚಹಾ ನೀಡಿದ ಕಾರಣ, ಗೃಹಿಣಿಯರಿಂದ ಉದ್ಯಮಿಗಳವರೆಗೂ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಊಟ, ತಿಂಡಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.

ಸ್ಪೈಸ್ ಜೆಟ್ ಸ್ಪಷ್ಟನೆ:
ಈ ವಿಳಂಬಕ್ಕೆ ಸೂಕ್ತವಾದ ಕಾರಣವನ್ನು ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಸ್ಪಷ್ಟಪಡಿಸಿಲ್ಲ. ಒಟ್ಟಿನಲ್ಲಿ ಬೆಂಗಳೂರಿಗೆ ಬರಲು ಸಿದ್ದರಾಗಿದ್ದ ಪ್ರಯಾಣಿಕರು ಇನ್ನು ಹಲವು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾಯಬೇಕಾಗಿದೆ.
ವಿಮಾನ ಪ್ರಯಾಣಿಕರಿಗೆ ಸೂಕ್ತ ಪರಿಹಾರ ನೀಡುತ್ತಾರೆಯೇ?
ಈ ಘಟನೆ ವಿಮಾನಯಾನ ಸಂಸ್ಥೆಗಳ ಸೇವಾ ಗುಣಮಟ್ಟದ ಬಗ್ಗೆ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಪ್ರಯಾಣಿಕರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಈ ಸಂಸ್ಥೆ ಸರಿಯಾದ ನ್ಯಾಯ ನೀಡಲಿದೆಯೇ?