Politics

ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ.

ಮಾರ್ಚ್ 13 ರಂದು ಭಾರತೀಯ ಜನತಾ ಪಕ್ಷ ತನ್ನ ಎರಡನೇ ಅಭ್ಯರ್ಥಿ ಪಟ್ಟಿಯನ್ನು ಹೊರಹಾಕಿದ್ದು, ಕರ್ನಾಟಕದಿಂದ ಸ್ಪರ್ಧಿಸುವ 20 ಅಭ್ಯರ್ಥಿಗಳ ಹೆಸರನ್ನು ಮೊದಲ ಬಾರಿಗೆ ಸೂಚಿಸಿದೆ. ಹಾಗಾದ್ರೆ ಯಾರ್ಯಾರಿಗೆ ಈ ಬಾರಿಯ ಲೋಕಸಭಾ ಚುನಾವಣೆ ಟಿಕೆಟ್ ಸಿಕ್ಕಿದೆ ಎಂಬುದನ್ನು ನೋಡೋಣ.

  • ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಶ್ರೀ. ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ.
  • ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಶ್ರೀ. ಪಿ. ಸಿ. ಗಡ್ಡಿಗೌಡರ್.
  • ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಶ್ರೀ. ರಮೇಶ್ ಜಿಗಜಿನಗಿ.
  • ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಡಾ. ಉಮೇಶ್ ಜಿ. ಜಾಧವ್.
  • ಬೀದರ್ ಲೋಕಸಭಾ ಕ್ಷೇತ್ರದಿಂದ ಶ್ರೀ. ಭಗವಂತ್ ಖೂಬಾ.
  • ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಡಾ. ಬಸವರಾಜ್ ಕ್ಯಾವಟೂರ್
  • ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀ. ಬಿ. ಶ್ರೀರಾಮುಲು.
  • ಹಾವೇರಿ ಲೋಕಸಭಾ ಕ್ಷೇತ್ರದಿಂದ ಶ್ರೀ. ಬಸವರಾಜ ಬೊಮ್ಮಾಯಿ.
  • ಧಾರವಾಡ ಲೋಕಸಭಾ ಕ್ಷೇತ್ರದಿಂದ ಶ್ರೀ. ಪ್ರಹ್ಲಾದ್ ಜೋಶಿ.
  • ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶ್ರೀಮತಿ. ಗಾಯತ್ರಿ ಸಿದ್ದೇಶ್ವರ.
  • ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಶ್ರೀ. ಬಿ. ವೈ. ರಾಘವೇಂದ್ರ.
  • ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶ್ರೀ. ಕೋಟಾ ಶ್ರೀನಿವಾಸ್ ಪೂಜಾರಿ.
  • ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕ್ಯಾಪ್ಟನ್. ಬ್ರಿಜೇಶ್ ಚೌಟಾ.
  • ತುಮಕೂರು ಲೋಕಸಭಾ ಕ್ಷೇತ್ರದಿಂದ ಶ್ರೀ. ವಿ. ಸೋಮಣ್ಣ.
  • ಮೈಸೂರು ಲೋಕಸಭಾ ಕ್ಷೇತ್ರದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್.
  • ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಶ್ರೀ. ಎಸ್. ಬಾಲರಾಜ್.
  • ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ. ಸಿ. ಎನ್. ಮಂಜುನಾಥ್.
  • ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಶ್ರೀ.ಪಿ.ಸಿ. ಮೋಹನ್.
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಶ್ರೀ ತೇಜಸ್ವಿ ಸೂರ್ಯ.

ಈ ಬಾರಿ ಭಾರತೀಯ ಜನತಾ ಪಕ್ಷ ಹೊಸ ಮುಖಗಳಿಗೆ ಅವಕಾಶವನ್ನು ನೀಡಿದ್ದಾರೆ. ಕ್ಷೇತ್ರದ ಬೆಳವಣಿಗೆ, ಕಾರ್ಯಕರ್ತರ ಬೆಂಬಲ, ಮತದಾರರ ಒಲವು ಎಲ್ಲವನ್ನು ಗಮನಿಸಿ ಯಾರಿಗೆ ಸೀಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಸುದೀರ್ಘ ಚರ್ಚೆಯೊಂದಿಗೆ ಕರ್ನಾಟಕಕ್ಕೆ ತಮ್ಮ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇನ್ನು ಕೆಲವು ಹಾಲಿ ಸಂಸದರಿಗೆ ತನ್ನ ಎರಡನೆಯ ಪಟ್ಟಿಯಲ್ಲಿಯೂ ಸಹ ಹೆಸರನ್ನು ಸೂಚಿಸದ ಬಿಜೆಪಿ, ತಮ್ಮ ಮಾತು ಹಾಗೂ ನಡುವಳಿಕೆಗಳ ಬಗ್ಗೆ ಹಿಡಿತ ಇರಲಿ ಎಂದು ಇದರಿಂದ ಅವರನ್ನು ಎಚ್ಚರಿಸಿದಂತಾಗಿದೆ. ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ಮೂರನೇ ಪಟ್ಟಿಯೂ ಸಹ ಹೊರಬರಲಿದ್ದು, ಯಾರು ಇನ್, ಯಾರು ಔಟ್ ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿಯಲಿದೆ.

Show More

Leave a Reply

Your email address will not be published. Required fields are marked *

Related Articles

Back to top button