ಬಜೆಟ್ ಅಧಿವೇಶನ ಆರಂಭ..!

ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಇಂದು ಅಗಲಿದ ಗಣ್ಯರಿಗೆ ಸಂತಾಪ ಹಾಗೂ ಉಭಯ ಸದನಗಳ ಕಲಾಪ ರಾಜ್ಯಪಾಲರ ಭಾಷಣ ಇರಲಿದೆ. ವಿಧಾನಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡುವ ಮೂಲಕ 2025 ನೇ ಸಾಲಿನ ಮುಂಗಡಪತ್ರ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳವಾರದಿಂದ ಆಡಳಿತ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಸುವ ಸಾಧ್ಯತೆ ಇದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು 16ನೇ ಬಜೆಟ್ಅನ್ನ ಮಂಡಿಸಲಿದ್ದಾರೆ.
ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಲಿರುವಂತಹ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದಲ್ಲಿ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವಂತಹ ಅನ್ಯಾಯಗಳನ್ನು ಹಾಗೂ ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆದ ಅನುಕೂಲದ ಬಗ್ಗೆ ಸಮರ್ಥಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಾಗೆ ಬಿಜೆಪಿ ಸರ್ಕಾರ ಕೆಪಿಎಸ್ಸಿ ಹಗರಣ, ಮೈಟ್ರೋ ದರ ಏರಿಕೆ, ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ವಿಳಂಬ, ಬಸ್ ದರ ಏರಿಕೆ, ಅಭಿವೃದ್ಧಿ ಕಾರ್ಯಗಳ ಅನುದಾನದ ಕೊರತೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದಕ್ಕೆ ವಿರೋಧವಾಗಿ ಆಡಳಿತ ಪಕ್ಷ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯ, ಮೇಕೆದಾಟು ಯೋಜನೆ, ಮಹದಾಯಿ ನೀರಾವರಿ ಯೋಜನೆಗಳಿಗೆ ಸ್ಪಂದಿಸದ ಕೇಂದ್ರದ ನಡೆಯ ಬಗ್ಗೆ ಪ್ರತಿಪಕ್ಷಗಳತ್ತ ಬಾಣ ಬಿಡಲು ಕಾಂಗ್ರೆಸ್ ತಯಾರಿಯನ್ನು ಮಾಡಿಕೊಂಡಿದೆ ಎಂಬುದು ತಿಳಿದು ಬಂದಿದೆ. ಹಾಗೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಮೊದಲ ಬಾರಿಗೆ ಕುಳಿತುಕೊಂಡೆ ಬಜೆಟ್ ನ ಮಂಡಿಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರಿಗೆ ಸಹಾಯವಾಗುವ ಸಲುವಾಗಿ ವಿಧಾನಸೌಧದಲ್ಲಿ ವಿಶೇಷ ರೂಪ್ ಕೂಡ ಸಿದ್ಧಗೊಳ್ಳುತ್ತಿದೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ