Politics
ಡಿಸಿಎಂ ಕುರ್ಚಿಗೆ ಜಟಾಪಟಿ; ಹೈಕಮಾಂಡತ್ತ ಕೈ ಮಾಡಿದ ಡಿಕೆಶಿ.

ಬೆಂಗಳೂರು: ಡಿಸಿಎಂ ಹುದ್ದೆಯ ಬಗ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷಗಿರಿ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಚರ್ಚೆ ನಡೆಸಲಾಗುತ್ತಿದೆ. ಕೆಂಪೇಗೌಡರ ಜಯಂತೋತ್ಸವದ ಪ್ರಯುಕ್ತ ವಿಧಾನಸೌಧದ ಮುಂದೆ ಇರುವ ಕೆಂಪೇಗೌಡರ ಪ್ರತಿಮೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಲಾರ್ಪಣೆ ಮಾಡಿ, ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಬಾರದು, ಅದರ ಬದಲು ಹೈಕಮಾಂಡ್ ಬಳಿ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಆರಂಭವಾಗಿರುವ ಚರ್ಚೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೀಗೆ ಹೇಳಿದರು. ” ತುಂಬಾ ಸಂತೋಷ, ಸಮಯ ವ್ಯರ್ಥ ಮಾಡದೇ ಹೈಕಮಾಂಡ್ ಬಳಿ ಹೋಗಿ ಪರಿಹಾರ ಕಂಡುಕೊಳ್ಳಲಿ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಲಿ. ವೈದ್ಯರ ಬಳಿ ಹೋದರೆ ಔಷಧಿ ಕೊಡುತ್ತಾರೆ. ವಕೀಲ ಬಳಿ ಹೋದರೆ ನ್ಯಾಯ ಕೊಡಿಸುತ್ತಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ ನನ್ನದೇನೂ ಅಭ್ಯಂತರವಿಲ್ಲ.” ಎಂದರು.