Bengaluru
ಕರ್ನಾಟಕದ ಆರ್ಥಿಕತೆ 2032ರಲ್ಲಿ 1 ಟ್ರಿಲಿಯನ್ ಯುಎಸ್‌ಡಿ ಆಗಲಿದೆ – ಸಿದ್ದರಾಮಯ್ಯ.

ಬೆಂಗಳೂರು: ಕರ್ನಾಟಕದ ಆರ್ಥಿಕತೆಯ ಭವಿಷ್ಯವನ್ನು, ರಾಜ್ಯದ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯನವರು ನುಡಿದಿದ್ದಾರೆ. 2032ರ ವೇಳೆಗೆ ಕರ್ನಾಟಕದ ಆರ್ಥಿಕತೆ ಒಂದು ಟ್ರಿಲಿಯನ್ ಯುಎಸ್‌ಡಿ ಗಡಿಯನ್ನು ಮುಟ್ಟಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಕೈಗಾರಿಕಾ ಬೆಳವಣಿಗೆ ದರವು ವಾರ್ಷಿಕವಾಗಿ 15% ದಷ್ಟು ಬೆಳವಣಿಗೆ ಮಾಡುವ ಗುರಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಹೊಂದಿದೆ. ಈ ಗುರಿಯು 2032ರವರೆಗೆ ಸರಿಯಾಗಿ ನಡೆದರೆ ಕರ್ನಾಟಕ ರಾಜ್ಯವು ಒಂದು ಟ್ರಿಲಿಯನ್ ಯುಎಸ್ ಡಾಲರ್ ನ ಒಡೆತನ ಹೊಂದಲಿದೆ ಎಂಬುದು ಪ್ರಸ್ತುತ ಸರ್ಕಾರದ ದೂರಾಲೋಚನೆ.
ಆದರೆ ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಉಚಿತ ಗ್ಯಾರಂಟಿ ಯೋಜನೆಗಳಿಂದ, ಈ ಸಾಧನೆ ಮುಂದೆ ಕೈಗೊಳ್ಳಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.