Bengaluru
ರಾಜ್ಯದಲ್ಲಿ ಹೆಚ್ಚಾಗುತ್ತಿದೆ ರೈತರ ಆತ್ಮಹತ್ಯೆ! ಹೊರಬಂದಿದೆ ಆತಂಕಕಾರಿ ಮಾಹಿತಿ.
ಬೆಂಗಳೂರು: ರಾಜ್ಯದ ಜನರು ಆತಂಕ ಪಡುವ ಸಂಗತಿ ಇದೀಗ ಹೊರ ಬಂದಿದೆ. ಕರ್ನಾಟಕ ರಾಜ್ಯ ಕೇವಲ 15 ತಿಂಗಳಲ್ಲಿ, ಬರೋಬ್ಬರಿ 1,182 ರೈತರ ಆತ್ಮಹತ್ಯೆಯನ್ನು ಕಂಡಿದೆ. ರಾಜ್ಯದ ಹಾಗೂ ದೇಶದ ಜನರ ಹಸಿವನ್ನು ನೀಗಿಸುವ ಅನ್ನದಾತ, ಈ ರೀತಿ ಆತ್ಮಹತ್ಯೆ ಮಾಡಿಕೊಂಡರೆ ದೇಶದ ಭವಿಷ್ಯದ ಕುರಿತು ಚಿಂತಿಸುವ ಅಗತ್ಯ ಉಂಟಾಗುತ್ತದೆ.
ತೀವ್ರ ಬರ, ಬೆಳೆ ಹಾನಿ, ಸಾಲದ ಹೊರೆ, ಈ ರೀತಿಯಾದ ಹತ್ತು ಹಲವು ಕಾರಣಗಳಿಂದಾಗಿ 2023 ಏಪ್ರಿಲ್ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
- ಬೀದರ್- 36
- ಕಲಬುರ್ಗಿ- 69
- ಯಾದಗಿರಿ- 68
- ವಿಜಯಪುರ- 57
- ಬೆಳಗಾವಿ- 122
- ಬಾಗಲಕೋಟೆ- 19
- ರಾಯಚೂರು- 18
- ಉತ್ತರ ಕನ್ನಡ- 6
- ಧಾರವಾಡ- 101
- ಗದಗ- 32
- ಕೊಪ್ಪಳ- 30
- ವಿಜಯನಗರ- 37
- ಬಳ್ಳಾರಿ- 19
- ಹಾವೇರಿ- 120
- ಶಿವಮೊಗ್ಗ- 66
- ದಕ್ಷಿಣ ಕನ್ನಡ- 6
- ಚಿಕ್ಕಮಗಳೂರು- 89
- ದಾವಣಗೆರೆ- 43
- ಚಿತ್ರದುರ್ಗ- 36
- ತುಮಕೂರು- 22
- ಹಾಸನ- 47
- ಕೊಡಗು- 6
- ಮೈಸೂರು- 74
- ಮಂಡ್ಯ- 45
- ಚಾಮರಾಜನಗರ- 2
- ಚಿಕ್ಕಬಳ್ಳಾಪುರ- 2
- ಬೆಂಗಳೂರಿನ ನಗರ- 1
- ರಾಮನಗರ- 9
ಇದು ಜಿಲ್ಲಾವಾರು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಅಂಕಿ ಅಂಶವಾಗಿದೆ.