Bengaluru

ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭಿಸಿದ ಸರ್ಕಾರ.

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ದೇಶ ವಿದೇಶಿದಿಂದ ಪ್ರಾಣಿ ಮತ್ತು ಪಕ್ಷಿ ಪ್ರೇಮಿಗಳನ್ನು ಸದಾ ತನ್ನತ್ತ ಸೆಳೆಯುತ್ತದೆ. ಈ ಪ್ರದೇಶದಲ್ಲಿ ಅನೇಕ ವಿಧವಾದ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಕಾಣಬಹುದಾಗಿದೆ. ಈಗ ಬನ್ನೇರುಘಟ್ಟಕ್ಕೆ ಇನ್ನಷ್ಟು ಒತ್ತು ನೀಡಿ, ರಾಜ್ಯ ಸರ್ಕಾರ ಒಂದು ಹೊಸ ಹೆಜ್ಜೆಯನ್ನು ಇಟ್ಟಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ದೇಶದಲ್ಲೇ ಅತಿ ದೊಡ್ಡ ಚಿರತೆ ಸಫಾರಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದೆ. ಈ ವಿಶಿಷ್ಟ ಸಫಾರಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು. ಅರಣ್ಯ, ಪರಿಸರ, ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಜೊತೆಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವ ರಾಜ್ಯ ಸರ್ಕಾರದ ಈ ನಿರ್ಣಯ ಶ್ಲಾಘನೀಯ.

ಈ ಸಫಾರಿಯು 20 ಹೆಕ್ಟೇರ್ ಪ್ರದೇಶದಲ್ಲಿ, ₹4.5 ಕೋಟಿ ವೆಚ್ಚದಲ್ಲಿ, ಅತ್ಯಾಧುನಿಕ ಹಾಗೂ ಸುರಕ್ಷಿತ ವಿನ್ಯಾಸ ಮಾಡಲಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button