Bengaluru
ಕರ್ನಾಟಕದ ಚಾರಣಿಗರಿಗೆ ಸಿಹಿ ಸುದ್ದಿ.
ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕದ ಚಾರಣ ಅಂದರೆ ಟ್ರೆಕ್ಕಿಂಗ್ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಯಾವುದೇ ಗೊಂದಲ ಇಲ್ಲದೆ ನೀವು ಕರ್ನಾಟಕದ ಟ್ರೆಕ್ಕಿಂಗ್ ಜಾಗಗಳಿಗೆ ಹಾಯಾಗಿ ಟ್ರೆಕ್ಕಿಂಗ್ ಮಾಡಬಹುದು.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು, ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಸೌಲಭ್ಯಕ್ಕೆ ಅರಣ್ಯ ಸಚಿವರಾದ ಶ್ರೀ. ಈಶ್ವರ ಖಂಡ್ರೆ ಅವರು ಚಾಲನೆ ನೀಡಿದರು. ಸಾವಿರಾರು ಚಾರಣಿಗರು ಒಮ್ಮೆಲೇ ಆಗಮಿಸಿ ಗೊಂದಲ ಉಂಟಾಗದಂತೆ ತಡೆಯಲು ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಮಳೆಯ ಕಾರಣಕ್ಕೆ ಅಪಾಯ ಸಂಭವಿಸದಿರಲು, ಜೀವ ಪರಿಸರಕ್ಕೂ ಹಾನಿಯಾಗದಿರಲು, ಆಗಸ್ಟ್ ನಿಂದ ಚಾರಣಕ್ಕೆ ಮರು ಚಾಲನೆ ನೀಡಲಾಗುತ್ತಿದೆ.
ಕರ್ನಾಟಕದ ಟಾಪ್ 10 ಟ್ರೆಕ್ಕಿಂಗ್ ಜಾಗಗಳು:
- ಝಡ್ ಪಾಯಿಂಟ್ ಟ್ರೆಕ್, ಕೆಮ್ಮಣ್ಣುಗುಂಡಿ.
- ಬಾಬಾ ಬುಡನ್ ಗಿರಿ.
- ಕುದುರೆಮುಖ
- ಕೊಡಚಾದ್ರಿ
- ಮುಳ್ಳಯ್ಯನಗಿರಿ
- ಸಾವನದುರ್ಗ
- ಕುಂತಿ ಬೆಟ್ಟ
- ಅಂತರಗಂಗೆ ಬೆಟ್ಟ
- ಕುಡ್ಲು ಜಲಪಾತ
- ಜೇನುಕಲ್ಲು ಗುಡ್ಡ