ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ಗುರುವಾರ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆಮೇಲೆ ದಾಳಿ ನಡೆಸಿ, ಅಕ್ರಮ ಆಸ್ತಿ ಗಳಿಸಿದ ಆರೋಪದಡಿ 26 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಅಶ್ಚರ್ಯಕರ ಮಾಹಿತಿಗಳು ಹೊರಬಿದ್ದಿದ್ದು, ಅಧಿಕಾರಿಗಳ ಆಸ್ತಿಗಳ ವಿವರ ಶಾಕ್ ನೀಡಿದೆ.
ಕಾವೇರಿ ನೀರಾವರಿ ನಿಗಮದ ಎಂಡಿ ಮನೆಗೆ ದಾಳಿ:
ಕಾವೇರಿ ನೀರಾವರಿ ನಿಗಮ ಲಿಮಿಟೆಡ್ (CNNL)ನ ವ್ಯವಸ್ಥಾಪಕ ನಿರ್ದೇಶಕ ಮಹೇಶಗೆ ಸೇರಿದ 25 ಪ್ಲಾಟ್ಸ್, 25 ಎಕರೆ ಕೃಷಿ ಭೂಮಿ, ಮತ್ತು ಇತರ ಆಸ್ತಿ ಸೇರಿ 6.89 ಕೋಟಿ ರೂ. ಮೌಲ್ಯದ ಆಸ್ತಿಗಳು ಪತ್ತೆಯಾಗಿದೆ.
ನಗರ ಯೋಜನಾ ನಿರ್ದೇಶಕ ತಿಪ್ಪೇಸ್ವಾಮಿ ಎನ್.ಕೆ. ಆಸ್ತಿ ಬಯಲು:
ಬೆಂಗಳೂರು ನಗರ ಯೋಜನಾ ನಿರ್ದೇಶಕರಾದ ತಿಪ್ಪೇಸ್ವಾಮಿ ಅವರ 7.5 ಎಕರೆ ಕೃಷಿ ಭೂಮಿ, ಎರಡು ಮನೆಗಳು, ಮತ್ತು ಸ್ಥಿರಾಸ್ತಿಯ ಒಟ್ಟಾರೆ ಮೌಲ್ಯ 3.38 ಕೋಟಿ ರೂ. ಎಂದು ಲೆಕ್ಕ ಹಾಕಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿ ಮೋಹನ್ ಕೆ. ಆಸ್ತಿ:
ಬಸವನಗುಡಿಯ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಇಲಾಖೆಯ ಅಧೀಕ್ಷಕರಾದ ಮೋಹನ್ ಅವರ 3 ಪ್ಲಾಟ್ಸ್, 2 ಮನೆಗಳು, ಮತ್ತು ಸ್ಥಿರ ಆಸ್ತಿಗಳ ಒಟ್ಟಾರೆ ಮೌಲ್ಯ 4.37 ಕೋಟಿ ರೂ.
ಜಿಯಾಲಜಿಸ್ಟ್ ಕೃಷ್ಣವೇಣಿ ಎಂ.ಸಿ. ಆಸ್ತಿ ವಿವರ:
ಮಂಗಳೂರು ಜಿಲ್ಲೆಯ ಹಿರಿಯ ಭೂಗರ್ಭ ಶಾಸ್ತ್ರಜ್ಞೆಯಾದ ಕೃಷ್ಣವೇಣಿ ಅವರ 26 ಎಕರೆ ಕಾಫಿ ತೋಟ, 3 ಪ್ಲಾಟ್ಸ್, ಮತ್ತು ಯಲಹಂಕದ ಫ್ಲಾಟ್, ಸೇರಿದಂತೆ 11.93 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ.
ದಾಳಿಯಲ್ಲಿ ಸಿಕ್ಕ ಲೆಕ್ಕ:
ಲೆಕ್ಕಾಚಾರಗಳ ಪ್ರಕಾರ, ಈ ನಾಲ್ವರು ಅಧಿಕಾರಿಗಳಿಂದ ಒಟ್ಟಾರೆ 26 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ.