ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗೆ ಎಚ್ಚರಿಕೆ!

ಬೆಂಗಳೂರು: ನೀವು ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಜಲಪಾತ ವೀಕ್ಷಣೆ, ಟ್ರೆಕ್ಕಿಂಗ್, ಹೀಗೆ ಹತ್ತು ಹಲವು ಸಾಹಸ ಕಾರ್ಯಗಳನ್ನು ಮಾಡಲು ಇಚ್ಚಿಸಿದರೆ ಇಲ್ಲಿದೆ ನಿಮಗೆ ಎಚ್ಚರಿಕೆ. ಇದು ಖುದ್ದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡಿರುವ ಅಧಿಕೃತ ಮಾಹಿತಿಯಾಗಿದೆ.
“ಮಾನ್ಸೂನ್ ಸಮಯದಲ್ಲಿ, ಸಾಹಸಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಟ್ರೆಕ್ಕಿಂಗ್, ಹೈಕಿಂಗ್ ನಂತಹ ಸಾಹಸಿ ಚಟುವಟಿಕೆಗಳಿಗೆ ಮುಂದಾಗುತ್ತಾರೆ. ಆದರೆ ನೆನಪಿಡಿ, ರಾಜ್ಯದಾದ್ಯಂತ ಭಾರೀ ಮಳೆ ಆಗುತ್ತಿರುವ ಕಾರಣ, ಜಲಪಾತಗಳು ತುಂಬಿ ತುಳುಕುತ್ತಿದೆ, ಅಲ್ಲಲ್ಲಿ ಭೂಮಿ ಕುಸಿಯುತ್ತಿದೆ, ಆದ್ದರಿಂದ ನಿಮ್ಮ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ, ಜವಾಬ್ದಾರಿಯುತ ಪ್ರಯಾಣಿಕರಾಗಿರಿ ಮತ್ತು ಪ್ರಕೃತಿಯನ್ನು ಕಾಪಾಡಿ ಮತ್ತು ಪರಿಸರವನ್ನು ಸ್ವಚ್ಛವಾಗಿಡಿ.” ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಸಿದೆ.
ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ, ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಇಂತಹ ಸಂದರ್ಭದಲ್ಲಿ ಸಾಹಸ ಪ್ರವಾಸಗಳನ್ನು ಕೈಗೊಂಡ ತಮ್ಮ ಜೀವದ ಸುರಕ್ಷತೆಯನ್ನು ಪಣಕ್ಕೆ ಇಡಬೇಡಿ.