ಬೆಂಗಳೂರು: ಕರ್ನಾಟಕದಲ್ಲಿ ಮದ್ಯ ವ್ಯಾಪಾರ ಮತ್ತು ಅಬಕಾರಿ ಇಲಾಖೆಯೊಳಗೆ ಭ್ರಷ್ಟಾಚಾರ ಆರೋಪ ಭುಗಿಲೆದ್ದಿದೆ. ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಬಕಾರಿ ಸಚಿವರ ವಿರುದ್ಧ ಲಂಚದ ಬೇಡಿಕೆ ಕುರಿತು ಗಂಭೀರ ಆರೋಪಗಳನ್ನು ಹೊರಿಸಿರುವುದರಿಂದ, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಸೋಸಿಯೇಶನ್ ಪ್ರಕಾರ, ಅಬಕಾರಿ ಸಚಿವರು ಲೈಸೆನ್ಸ್ ಮತ್ತು ಅನುಮತಿ ಪ್ರಕ್ರಿಯೆಗಳಲ್ಲಿ ಬದಲಾವಣೆ ಮಾಡುತ್ತಾ, ಮದ್ಯ ವ್ಯಾಪಾರಿಗಳಿಗೆ ಅನುಕೂಲಕರ ಅವಕಾಶಗಳು ದೊರಕಿಸಲು ಲಂಚದ ಒತ್ತಡ ತರುತ್ತಿದ್ದಾರೆ. ಮದ್ಯ ವ್ಯಾಪಾರಿಗಳು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅಬಕಾರಿ ಇಲಾಖೆಯ ಲಂಚ ಬೇಡಿಕೆಯೂ ಕೂಡ ತಮಗೆ ತಲೆ ನೋವಾಗಿದೆ ಎಂದು ಅಸೋಸಿಯೇಶನ್ ತಿಳಿಸಿದೆ.
ಈ ಆರೋಪಗಳಿಂದಾಗಿ ಸರ್ಕಾರದ ಅಬಕಾರಿ ಇಲಾಖೆಯ ನಿಷ್ಠೆ ಮತ್ತು ಪಾರದರ್ಶಕತೆ ಪ್ರಶ್ನೆಗೀಡಾಗಿದೆ. ಅಸೋಸಿಯೇಶನ್ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆಯನ್ನು ಒತ್ತಾಯಿಸುತ್ತಿದ್ದು, ಅಬಕಾರಿ ಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಮನವಿ ಮಾಡಿದೆ.
ಈ ಮಧ್ಯೆ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ರಾಜ್ಯದ ಮದ್ಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ರಾಜ್ಯ ಸರ್ಕಾರದ ಹೆಸರಿಗೆ ಕೂಡ ಕಳಂಕ ತರುತ್ತಿದೆ.