Politics

ಕಸ್ತೂರಿ ರಂಗನ್ ವರದಿ ತಿರಸ್ಕಾರ: ಮಲೆನಾಡಿನ ಜನರಿಗಿದು ಸಂತಸದ ವಿಷಯ ಏಕೆ..?!

ಶಿವಮೊಗ್ಗ: ಮಲೆನಾಡಿಗರ ಬಹುಕಾಲದ ಬೇಡಿಕೆಯನ್ನು ರಾಜ್ಯ ಸರ್ಕಾರದ ಮಹತ್ವದ ನಿರ್ಣಯದೊಂದಿಗೆ ಈಡೇರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪಶ್ಚಿಮ ಘಟ್ಟ ವಲಯವನ್ನು ಪರಿಸರ ಸೂಕ್ಷ್ಮ ಪ್ರದೇಶ (ESZ) ಎಂದು ಘೋಷಿಸುವುದನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಡಾ. ಕಸ್ತೂರಿ ರಂಗನ್‌ ಅವರ ವರದಿ, ಈ ಪ್ರದೇಶದ ಜನತೆಯ ಜೀವನದ ಮೇಲೆ ಮಾರಕ ಪ್ರಭಾವ ಬೀರುವ ಸಾಧ್ಯತೆ ಇದ್ದ ಕಾರಣ, ಇದರ ವಿರುದ್ಧ ಮಲೆನಾಡಿಗರು ಹೋರಾಟ ಮಾಡುತ್ತಿದ್ದರು.

ಪಶ್ಚಿಮ ಘಟ್ಟದ ಅರಣ್ಯದಂಚಿನಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು ವರದಿ ಅನುಷ್ಠಾನದಿಂದ ಜಮೀನಿನಿಂದ ವಂಚಿತರಾಗುವ ಆತಂಕಕ್ಕೆ ಒಳಗಾಗಿದ್ದರು. ಈ ಆತಂಕಗಳನ್ನು ಮನಗಂಡ ಸರ್ಕಾರ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದು ಹರ್ಷದ ವಿಷಯವಾಗಿದೆ. ಸಚಿವ ಸಂಪುಟವು ಈ ನಿರ್ಧಾರವನ್ನು ಕೈಗೊಂಡಿದ್ದು, ಮಲೆನಾಡಿನ ಜನತೆಗೆ ದೊಡ್ಡ ಸಮಾಧಾನವನ್ನು ಒದಗಿಸಿದೆ.

Show More

Related Articles

Leave a Reply

Your email address will not be published. Required fields are marked *

Back to top button