Sports
ಗಳಗಳನೆ ಅತ್ತ ಕಾವ್ಯ ಮಾರನ್.
ಚೆನ್ನೈ: ನಿನ್ನೆ ನಡೆದ ಟಾಟಾ ಐಪಿಎಲ್ 2024ರ ಫೈನಲ್ಸ್, ಗೆದ್ದ ತಂಡಕ್ಕೆ ಖುಷಿ ತಂದರೆ, ಸೋತ ತಂಡಕ್ಕೆ ಎಂದಿನಂತೆ ದುಃಖ ತಂದಿದೆ. ನಿನ್ನೆ ಕೆಕೆಆರ್ ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಅತ್ಯಂತ ಸುಲಭವಾಗಿ ಮಣಿಸಿ, ಟ್ರೋಫಿ ಗೆದ್ದಿದೆ. ಇದೇ ಸಂದರ್ಭದಲ್ಲಿ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಕಣ್ಣೀರು ಸುರಿಸಿದ್ದಾರೆ.
ಕಾವ್ಯ ಮಾರನ್ ತನ್ನ ತಂಡಕ್ಕೆ ಹುಮ್ಮಸ್ಸು ತುಂಬುತ್ತಾ, ಚಪ್ಪಾಳೆ ತಟ್ಟುತ್ತಾ, ಕ್ಯಾಮೆರಾಗೆ ಬೆನ್ನು ಮಾಡಿ ಕಣ್ಣೀರು ಒರೆಸಿಕೊಳ್ಳುವ ದೃಶ್ಯ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯ ಕಂಡ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್, ಕೊನೆಯ ಹಂತದಲ್ಲಿ ಎಡವಿ ಕಪ್ ಕೈತಪ್ಪುವಂತೆ ಮಾಡಿಕೊಂಡಿದ್ದಾರೆ.