
ಚಿತ್ರದುರ್ಗ: ಜೂನ್ 09 ರಂದು ನಟಿ ದರ್ಶನ್, ಪವಿತ್ರಾ ಗೌಡ ಹಾಗೂ ಸಹಚರರು ಸೇರಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ದೇಶದಾದ್ಯಂತ ಸುದ್ದಿ ಮಾಡಿದೆ. ಈ ಮಧ್ಯೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ದರ್ಶನ್ ಅವರನ್ನು ಬ್ಯಾನ್ ಮಾಡುವ ಕುರಿತು ಚರ್ಚೆ ಕೂಡ ನಡೆಸಿದ್ದರು.
ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು, ಮೃತಪಟ್ಟ ರೇಣುಕಾ ಸ್ವಾಮಿ ಅವರ ಕುಟುಂಬವನ್ನು ಭೇಟಿಯಾಗಲು ತೆರಳಿದ್ದಾರೆ. ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದೇವೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರು ಈ ಹಿಂದೆ ತಿಳಿಸಿದ್ದರು.
ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್, ಜಯಸಿಂಹ ಮುಸುರಿ, ಕೆ.ವಿ. ಚಂದ್ರಶೇಖರ, ಚಿನ್ನೇಗೌಡ, ಕರಿ ಸುಬ್ಬು, ಉಮೇಶ್ ಬಣಕರ್, ಕುಶಾಲ್, ಕೆಂಪಯ್ಯ, ಹಾಗೂ ಇತರರು ತೆರಳಿದ್ದಾರೆ.