CinemaEntertainment

‘ಕರಾವಳಿ’ಗೆ ಖಡಕ್ ಎಂಟ್ರಿ: “ದೊಡ್ಡವರ” ಪಾತ್ರದಲ್ಲಿ ರಮೇಶ್ ಇಂದಿರ ಗತ್ತು ನೋಡಿ…!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈಗ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ‘ಕರಾವಳಿ’. ಪ್ರಜ್ವಲ್ ದೇವರಾಜ್ ನಟನೆಯ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಆಗಲೇ ಅಭಿಮಾನಿಗಳ ಕುತೂಹಲವನ್ನು ತೀಕ್ಷ್ಣಗೊಳಿಸಿದೆ. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ‘ಕರಾವಳಿ’ ತಂಡ ಮತ್ತೊಂದು ಭರ್ಜರಿ ಸುದ್ದಿಯೊಂದಿಗೆ ಬಂದಿದೆ. ಖ್ಯಾತ ನಟ ರಮೇಶ್ ಇಂದಿರಾ ದೊಡ್ಡವರಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಮೇಶ್ ಇಂದಿರಾ – ಖದರ್ ಲುಕ್!

ಈ ಚಿತ್ರದಲ್ಲಿ ರಮೇಶ್ ಇಂದಿರ ಅವರ ‘ದೊಡ್ಡವರ’ ಪಾತ್ರ ಪ್ರಾದೇಶಿಕ ತಾಕತ್ತು, ಭಯ, ಮತ್ತು ಗೌರವವನ್ನು ಎತ್ತರಿಸುವಂಥದ್ದು. ಕಂಬಳ ಲೋಕದಲ್ಲಿ ಭರ್ಜರಿ ಹೆಸರಾಗಿರುವ ಈ ಪಾತ್ರಕ್ಕೆ ರಮೇಶ್ ಇಂದಿರ ಅದ್ದೂರಿಯಾಗಿ ಕಣ್ತುಂಬುತ್ತಾರೆ. ಪೋಸ್ಟರ್‌ನಲ್ಲಿ ಗನ್ ಹಿಡಿದು, ಕಾರ್ ಮೇಲೆ ಕುಳಿತು ಶೂಟ್ ಮಾಡುತ್ತಿರುವ ಅವರ ರಗ್ಡ್ ಅವತಾರ ಅಭಿಮಾನಿಗಳಲ್ಲಿ ಇನ್ನೂ ಹೊಸ ಕುತೂಹಲ ಮೂಡಿಸಿದೆ.

ಪ್ರಜ್ವಲ್-ಸಂಪದಾ ಜೋಡಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ, ಸಂಪದಾ ನಾಯಕಿಯಾಗಿ ‘ಕರಾವಳಿ’ಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರವು ಹಳ್ಳಿ ಜೀವನ, ಪ್ರಾಣಿ-ಮನುಷ್ಯ ನಡುವಿನ ಸಂಘರ್ಷ, ಮತ್ತು ಪ್ರಾದೇಶಿಕ ಭಾವನೆಗಳ ಸುತ್ತಮುತ್ತ ತಿರುಗುತ್ತದೆ. ಸುಮಾರು 60% ಚಿತ್ರೀಕರಣ ಮುಗಿಸಿರುವ ‘ಕರಾವಳಿ’ ಹೊಸ ಅನುಭವವನ್ನು ನೀಡಲು ಸಜ್ಜಾಗಿದೆ.

ಸಂಗೀತ ಮತ್ತು ನಿರ್ಮಾಣ:

ಈ ಸಿನಿಮಾಕ್ಕೆ ಸಂಗೀತವನ್ನು ಸಚಿನ್ ಬಸ್ರೂರು ಸಂಯೋಜನೆ ಮಾಡಿದ್ದಾರೆ, ಗಾಣಿಗ ಫಿಲ್ಮ್ಸ್ ಮತ್ತು ವಿಕೆ ಫಿಲ್ಮಂ ಅಸೋಸಿಯೇಷನ್ ನಿರ್ಮಾಣದ ಹೊಣೆ ಹೊತ್ತಿವೆ.

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ:

‘ಕರಾವಳಿ’ ಇದೀಗ ರಮೇಶ್ ಇಂದಿರ ಅವರ ಖಡಕ್ ಪಾತ್ರದ ಮೂಲಕ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿದೆ. ಅವರ ರಗಡ್ ಲುಕ್ ಮತ್ತು ಶಕ್ತಿಶಾಲಿ ಪಾತ್ರವು, ಚಿತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

Show More

Leave a Reply

Your email address will not be published. Required fields are marked *

Related Articles

Back to top button