Bengaluru
ನಂದಿನಿ ದರ ಹೆಚ್ಚಳ! ಗ್ರಾಹಕರಿಗೆ ಶಾಕ್ ಕೊಟ್ಟ ಕೆಎಂಎಫ್.
ಬೆಂಗಳೂರು: ಕರ್ನಾಟಕದ ಹಾಲಿನ ಬ್ರಾಂಡ್ ಆದ ನಂದಿನಿ ಈಗ ಗ್ರಾಹಕರಿಗೆ ಶಾಕ್ ನೀಡಿದೆ. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ತರಕಾರಿಯಿಂದ ಹಿಡಿದು ಬೆಳ್ಳಿಕಾಳಿನವರಿಗೆ ದರ ದುಪ್ಪಟ್ಟು ಆಗಿರುವ ಸಂದರ್ಭದಲ್ಲಿ, ಕರ್ನಾಟಕ ಮಿಲ್ಕ್ ಫೆಡರೇಶನ್ ರಾಜ್ಯದ ಜನರಿಗೆ ಮತ್ತೊಂದು ಶಾಕ್ ನೀಡಿದೆ. ಇನ್ನು ಮುಂದೆ ಗ್ರಾಹಕರು ನಂದಿನಿ ಹಾಲಿಗೆ ₹2 ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.
ನಂದಿನಿ ಹಾಲಿನ ಮಾದರಿಗಳಾದ ಟೋನ್ಡ್ ಹಾಲು, ಹೋಮೋಜಿನೈಸ್ಡ್ ಟೋನ್ಡ್ ಹಾಲು, ಹೋಮೋಜಿನೈಸ್ಡ್ ಹಸುವಿನ ಹಾಲು, ಸ್ಪೆಷಲ್ ಹಾಲು, ಶುಭಂ ಹಾಲು, ಸಮೃದ್ಧಿ ಹಾಲು, ಹೋಮೋಜಿನೈಸ್ಡ್ ಶುಭಂ ಹಾಲು, ಸಂತೃಪ್ತಿ ಹಾಲು, ಶುಭಂ ಗೋಲ್ಡ್ ಹಾಲು, ಹಾಗೂ ಡಬಲ್ ಟೋನ್ಡ್ ಹಾಲು ಪ್ಯಾಕೆಟಿನ ಮೇಲೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಿಸಿ ರಾಜ್ಯದಲ್ಲಿ ಇನ್ನೂ ತಣ್ಣಗೆ ಆಗದ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳದಿಂದ ರಾಜ್ಯದ ಜನರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ