ರಕ್ತದಲ್ಲಿ ಪತ್ರ ಬರೆದು KPSC ವಿರುದ್ಧ ಆಕ್ರೋಶ ಹೊರಹಾಕಿದ ಅಭ್ಯರ್ಥಿಗಳು..!

ರಾಜ್ಯದಲ್ಲಿ ಕೆಪಿಎಸ್‌ಸಿ ಕಾರ್ಯವೈಖರಿ ಹಳ್ಳ ಹಿಡಿದು ಹಲವು ದಿನಗಳೇ ಆದವು. ಎಷ್ಟೇ ಚೀಮಾರಿಯನ್ನು ಹಾಕಿದರೂ ಸಹ ರಾಜ್ಯ ಲೋಕಸೇವಾ ಆಯೋಗ ಎಮ್ಮೆ ಚರ್ಮದಂತೆ ಆಗಿ ಹೋಗಿದೆ. ಕೆಪಿಎಸ್ಸಿಯಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾಗದ ಅನ್ಯಾಯವನ್ನು ಖಂಡಿಸಿ ರಾಜ್ಯದಲ್ಲಿನ 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಕೆಪಿಎಸ್ಸಿ ಆಯೋಜಿಸಿದ್ದ ಕೆಪಿಸಿಎಲ್ ಪರೀಕ್ಷೆಯ ಫಲಿತಾಂಶ ಬಂದು ಎಂಟು ವರ್ಷವಾದರೂ ತೆರ್ಗಡೆ ಆದವರಿಗೆ ನೇಮಕಾತಿಯಾಗದೇ ಇರುವುದಕ್ಕೂ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಮುಖ್ಯಮಂತ್ರಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

384 ಗೆಜೆಟೆಡ್ ಪ್ರೊಬೇಷನಲ್ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆದ 70000ಕ್ಕೂ ಹೆಚ್ಚು ಅಭ್ಯರ್ಥಿಗಳು ಬೆಂಗಳೂರು ಸೇರಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಕರವೇ ಕಚೇರಿಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಎಲ್‌ನ ಪರೀಕ್ಷೆ ಬರೆದು ತೆರ್ಗಡೆ ಆದ ಅಭ್ಯರ್ಥಿಗಳಿಗೆ ನೇಮಕಾತಿಗೆ ಅಗ್ರಹಿಸಿ ಮಾರ್ಚ್ 6ರಂದು ಫ್ರೀಡಂ ಪಾರ್ಕ್ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಶಂಕರ್ ಕುಮಾರ್ ತಿಳಿಸಿದ್ದಾರೆ. 2017ರಲ್ಲಿ ಪರೀಕ್ಷೆ ನಡೆದರೂ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ ಸರ್ಕಾರ ಕೂಡಲೇ ಅವರಿಗೆ ಕೆಲಸ ನೀಡಿ ನ್ಯಾಯ ಒದಗಿ ಕೊಡಬೇಕು ಎಂದು ಅಗ್ರಹಿಸುತ್ತಾರೆ,
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ