

ರಾಯಚೂರು ಜಿಲ್ಲೆಯ ಕೃಷ್ಣಾ ನದಿ ದಡದಲ್ಲಿ ಇಂದು ಜನರು ಆಶ್ಚರ್ಯ ಪಡುವಂತಹ ದೃಶ್ಯ ಕಂಡು ಬಂದಿದೆ. ಇದ್ದಕ್ಕಿದ್ದಂತೆ ಕಂಡುಬಂದಿದೆ ವಿಷ್ಣು ದಶಾವತಾರ ವಿಗ್ರಹ ಹಾಗೂ ಶಿವಲಿಂಗ.
ಪುರಾತತ್ವ ಇಲಾಖೆಯ ಅಧಿಕಾರಿಗಳು ಇದನ್ನು ಪರೀಕ್ಷಿಸಿ, ಈ ವಿಗ್ರಹಗಳು 11ನೇ ಶತಮಾನದ ಕಾಲದ್ದಿರಬಹುದು. ಇವುಗಳು ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ್ದವು ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಹುಶಃ ಈ ವಿಗ್ರಹಗಳು ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ, ದೇವಾಲಯಗಳ ಧ್ವಂಸ ಮಾಡಿದ ಸಂದರ್ಭದಲ್ಲಿ ಈ ವಿಗ್ರಹಗಳನ್ನು ನದಿಗೆ ಎಸೆದಿದ್ದಾರೆ ಎಂದು ಅಧಿಕಾರಿಗಳು ಊಹಿಸಿದ್ದಾರೆ. ಈಗ ಈ ವಿಗ್ರಹಗಳನ್ನು ಪುರಾತತ್ವ ಇಲಾಖೆಯ ಸುಪರ್ದಿಗೆ ತೆಗೆದುಕೊಂಡಿದ್ದಾರೆ.