India

ಭಾರತಕ್ಕೆ ಬಂದಿಳಿದ 45 ಭಾರತೀಯ ಮೃತ ದೇಹ.

ಕೊಚ್ಚಿ: ಕುವೈತ್ ಅಗ್ನಿ ಅವಘಡದಲ್ಲಿ ಭಾರತೀಯ ಮೂಲದ 45 ಕೆಲಸಗಾರರು ಮೃತಪಟ್ಟಿದ್ದಾರೆ ಎಂದು ಕುವೈತ್ ಅಧಿಕೃತ ಮೂಲಗಳು ತಿಳಿಸಿವೆ. ಇಂದು 45 ಮೃತ ದೇಹಗಳನ್ನು ಹೊತ್ತ ಐಎಎಫ್ 130ಜೆ ವಿಮಾನ ಭಾರತಕ್ಕೆ ಬಂದು ಇಳಿದಿದೆ.

ಈ ದುರ್ಘಟನೆಯಲ್ಲಿ ಉತ್ತರ ಭಾರತದ ಕೆಲವು ಮಂದಿ ಮೃತಪಟ್ಟಿದ್ದರೆ, ಅತಿ ಹೆಚ್ಚಿನ ಸಾವು ಕೇರಳ ಒಂದೇ ರಾಜ್ಯದ ಮೂಲದವರದ್ದಾಗಿದೆ. ಕೇರಳ ರಾಜ್ಯದ ಬಹುತೇಕ ಜನರು ಉದ್ಯೋಗಕ್ಕಾಗಿ ಅರಬ್ ದೇಶಗಳಿಗೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಕುವೈತ್ ದೇಶದಲ್ಲಿ ಮಾನವ ಸಂಪನ್ಮೂಲದ ಕೊರತೆಯಿರುವುದರಿಂದ ಭಾರತೀಯರು ಈ ಕೊರತೆಯನ್ನು ನೀಗಿಸುತ್ತಿದ್ದಾರೆ. ಭಾರತೀಯರು ಅಲ್ಲಿ ಬೃಹತ್ ಉದ್ಯಮದಿಂದ ಹಿಡಿದು ಚಿಕ್ಕ ಉದ್ಯೋಗದವರೆಗೆ ಮಾಡುತ್ತಾರೆ.

ಈ ದುರಂತದಲ್ಲಿ ಆಂಧ್ರಪ್ರದೇಶದ ಮೂರು, ಕರ್ನಾಟಕದ ಒಬ್ಬರು ಮೃತಪಟ್ಟಿದ್ದಾರೆ ಎಂದು ಕುವೈತ್ ತಿಳಿಸಿದೆ.

Show More

Leave a Reply

Your email address will not be published. Required fields are marked *

Related Articles

Back to top button