ಲಾರಿ ಢಿಕ್ಕಿ ಚಾಲಕ ಸಾವು

ರಾಜಸ್ಥಾನದಿಂದ ಬೆಳ್ಳುಳ್ಳಿ ತುಂಬಿಕೊಂಡು ಬೆಂಗಳೂರಿನ ಯಶವಂತಪುರಕ್ಕೆ ಬರುತ್ತಿದ್ದವೇಳೆ ಅಪಘಾತ ಸಂಭವಿಸಿದ್ದು, ರಾಜಸ್ಥಾನ ಮೂಲದ ಅಜರುದ್ದೀನ್ ಮೃತಪಟ್ಟಿದ್ದಾರೆ. ಲಾರಿ ಚಾಲಕ ತಾಡ್‌ಪಾಲ್‌ಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚುವ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ನಿಂತಿದ್ದ ಇನ್ನೊಂದು ಲಾರಿಯನ್ನು ಚಾಲಕ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಜರುದ್ದೀನ್(24) ಅವರಿಗೆ ಡಿಕ್ಕಿಯಾಗಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಯಶವಂತಪುರ ಎಪಿಎಂಸಿ ಯಾರ್ಡ 5ನೇ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಅಜರುದ್ದೀನ್‌ಗೆ ತೀವ್ರ ಪ್ರಮಾಣದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಯಶವಂತಪುರ ಸಂಚಾರ ಠಾಣಾ ಪೋಲೀಸರು ಪರಿಶಿಲನೆಯನ್ನು ನಡೆಸಿ ಚಾಲಕನ ಮೃತದೇಹವನ್ನು ಆಸ್ಪತ್ರೆಗೆಯ ಶವಾಗಾರಕ್ಕೆ ಸಾಗಿಸಿದರು.ಡಿಕ್ಕಿ ಹೊಡೆದಂತಹ ಲಾರಿ ಚಾಲಕ ಲಾರಿಯನ್ನು ಘಟನೆ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಪರಾರಿಯಾದ ಲಾರಿ ಚಾಲಕ ಕೂಡ ರಾಜಸ್ಥಾನ ಎಂದು ತಿಳಿದು ಬಂದಿದೆ ಎಂದು ಸಂಚಾರ ವಿಭಾಗದ ಪೋಲೀಸರು ತಿಳಿಸಿದರು.

ಮೇಘಾ ಜಗದೀಶ್
ಆಲ್ಮಾ ಮೀಡಿಯಾ ವಿದ್ಯಾರ್ಥಿನಿ