CinemaEntertainment

ಲೂಡೋ ಪ್ರೀಮಿಯರ್ ಲೀಗ್: ಈ ಆಟದಲ್ಲಿ ದಾಳ ಉರುಳಿದರೆ ಹೆಜ್ಜೆ ಹಾಕ್ತಾರೆ ಕಲರ್ ಫುಲ್ ಮಾಡೆಲ್ಸ್..!

ನೀವೆಲ್ಲ ಕ್ರಿಕೆಟ್‌ ಪ್ರೀಮಿಯರ್‌ ಲೀಗ್..ಕಬ್ಬಡ್ಡಿ ಪ್ರೀಮಿಯರ್‌ ಲೀಗ್‌ ಹಾಗೂ ಇನ್ನು ಸಾಕಷ್ಟು ಗೇಮ್‌ ಲೀಗ್‌ಗಳನ್ನು ನೋಡಿದ್ದೀರ. ಆದರೆ ಲೂಡೋ ಪ್ರೀಮಿಯರ್‌ ಲೀಗ್‌ ಕೇಳಿದ್ದೀರಾ..? ಹೌದು, ಈಗ ಬರ್ತಾ ಇದೆ ಲೂಡೋ ಪ್ರೀಮಿಯರ್‌ ಲೀಗ್, ಮಂಗಳೂರು ತಂಡವೊಂದು ಈ ರೀತಿಯ ಒಂದು ಐಡಿಯಾ ಇಟ್ಕೊಂಡು, ಲೂಡೋ ಪ್ರೀಮಿಯರ್‌ ಲೀಗ್‌ನ ತರ್ತಾ ತರುತ್ತಾ ಇದಾರೆ. ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಈ ಲೀಗ್ ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಹಾಗಾದ್ರೆ ಏನಿದು ಲೂಡೋ ಪ್ರೀಮಿಯರ್‌ ಲೀಗ್‌ ನೋಡೋಣ ಬನ್ನಿ.

ತಂಡವೇ ಹೇಳುವಂತೆ ಇದೊಂದು ಮಜರಂಜನೆಯಾಟ. ಬುದ್ಧಿ ಹಾಗೂ ಚಾಣಾಕ್ಷತನದಿಂದ ಆಡಿದರೆ ಗೆಲುವು ನಿಶ್ಚಿತ. ಒಟ್ಟು ಎಂಟು ಈ ಲೂಡೋ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲಿದ್ದು, ಹದಿನಾರು ತಾರೆಯರು ಆಟ ಆಡಲಿದ್ದಾರೆ. ಅಂದರೆ ಪ್ರತೀ ಟೀಮ್‌ಗೆ ಇಬ್ಬರಂತೆ 8 ಪ್ರತ್ಯೇಕ ಟೀಮ್‌ಗೆ ಸೆಲೆಬ್ರಿಟಿಗಳ ಲೂಡೋ ಗೇಮ್‌ ನಡೆಯಲಿದೆ. ಆ ಎಂಟು ತಂಡಗಳು ಯಾವುವು ಅಂತಾ ನೋಡೋದಾದ್ರೆ..

  1. ಪ್ರೌಡ್‌ ತುಳುವರು – ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ
  2. ಮಿಮಿಕ್ರಿ ಮ್ಯಾಜಿಕ್ – ಮಿಮಿಕ್ರಿ ಗೋಪಿ ಮತ್ತು ವಿನುತ
  3. ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ
  4. ದಿ ಪವರ್ ಕಪಲ್ – ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್
  5. ಲಾಫ್ಟರ್ ಲೆಜೆಂಡ್ಸ್ – ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್
  6. ಮಲೆನಾಡು ಕ್ವೀನ್ಸ್ – ಚಂದನ ಗೌಡ ಮತ್ತು ಅಮೃತ
  7. ಗೌಡ ವಾರಿಯರ್ಸ್ – ಕೆಂಪೇಗೌಡ ಮತ್ತು ಮಾನ್ಯ ಗೌಡ
  8. ದಿ ಡ್ರೀಮರ್ಸ್ – ಸೀತಾರಾಮ್ ಮತ್ತು ಸಾಕ್ಷಿ ಮೇಘನ

ಇನ್ನು ಸಾಮಾನ್ಯವಾಗಿ ಲೂಡೋ ಆಡುವಾಗ, ನೀವೆಲ್ಲ ದಾಳ ಉರುಳಿಸಿದ ಮೇಲೆ ಕಲರ್‌ ಕಲರ್‌ ಪಾನ್‌ಗಳನ್ನು ಮುಂದಕ್ಕೆ ಮೂವ್‌ ಮಾಡ್ತೀರ. ಆದ್ರೆ ಈ ಲೂಡೋ ಪ್ರೀಮಿಯರ್‌ ಲೀಗ್‌ನಲ್ಲಿ ಮಾತ್ರ ಪಾನ್‌ಗಳನ್ನ ಮೂವ್‌ ಮಾಡಲ್ಲ. ಬದಲಾಗಿ ದಾಳ ಉರುಳಿಸಿದಂತೆಲ್ಲ ಮಾಡೆಲ್‌ ಗರ್ಲ್ಸ್‌ ಮೂವ್‌ ಆಗ್ತಾರೆ. ಅವರನ್ನ ಕಲರ್‌ ಗರ್ಲ್ಸ್‌ ಅಂತಾ ಕರೆಯಲಾಗುತ್ತೆ. ಎಂಟು ಟೀಮ್‌ಗಳ ಪೈಕಿ ಪ್ರತಿ ಒಂದು ಟೀಮ್‌ನಲ್ಲಿ ಇಬ್ಬರು ಮಾಡೆಲ್‌ ಗರ್ಲ್ಸ್‌ ಇರುತ್ತಾರೆ. ಅಂದರೆ ಒಟ್ಟು ಹದಿನಾರು ಮಾಡೆಲ್‌ ಗರ್ಲ್ಸ್‌ ಇರುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಕಲರ್‌ ಡ್ರೆಸ್‌ ಕೋಡ್‌ ಕೂಡ ಇರುತ್ತೆ.

ಇನ್ನು ಈ ಲೂಡೋ ಪ್ರೀಮಿಯರ್‌ ಲೀಗ್‌ ನ್ಯೂಸ್‌ ಫಸ್ಟ್‌ನಲ್ಲಿ ಪ್ರಸಾರವಾಗಲಿದ್ದು, ಪ್ರಸಾರದ ಟೈಮಿಂಗ್ಸ್‌ ಮತ್ತು ಗೆದ್ದವರಿಗೆಷ್ಟು ಬಹುಮಾನ ಎಂಬುದರ ಮಾಹಿತಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

Show More

Leave a Reply

Your email address will not be published. Required fields are marked *

Related Articles

Back to top button