BengaluruEducation

ಈ ಲೇಖಕರ ಹುಟ್ಟು -ಸಾವು ಒಂದೇ ದಿನ ಎಂಬುದೇ ಆಶ್ಚರ್ಯ!

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಬರವಣಿಗೆಗಳ ಮೂಲಕ ಓದುಗರಲ್ಲಿ ರೋಮಾಂಚನ ಉಂಟು ಮಾಡುತ್ತಿದ್ದ, ಕನ್ನಡ ಆಸ್ತಿ ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್. ಇವರ ಜೀವನದಲ್ಲಿ ವಿಶೇಷ ಎಂದರೆ ಇವರು ಹುಟ್ಟಿದ್ದು ದಿನಾಂಕ: 06.ಜೂನ್.1891, ಹಾಗೂ ವಿಧಿವಶರಾಗಿದ್ದರು ದಿನಾಂಕ: 06.ಜೂನ್.1986. ಇವರು ಹುಟ್ಟಿದ ದಿನಾಂಕ ಹಾಗೂ ಮರಣದ ದಿನಾಂಕ ಎರಡೂ ಒಂದೇ ಆಗಿರುವುದರಿಂದ ಇವರು ಲಕ್ಷದಲ್ಲಿ ಒಬ್ಬರು ಎನ್ನಬಹುದು.

‘ಮಾಸ್ತಿ ಕನ್ನಡದ ಆಸ್ತಿ’ ಇದು ಮಾಸ್ತಿ ಅವರಿಗೆ ಕನ್ನಡಿಗರು ನೀಡಿದ ಬಿರುದು. ಇವರಿಗೆ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ರಾಜಸೇವಾಸಕ್ತ’ ಎಂಬ ಬಿರುದನ್ನು ಕೂಡ ನೀಡಿ ಗೌರವಿಸಿದ್ದಾರೆ. ಇವರು ಅಂಕಿತನಾಮ ‘ಶ್ರೀನಿವಾಸ’. ಮಾಸ್ತಿ ಅವರು ತಮ್ಮ ಸಣ್ಣ ಕಥೆಗಳಿಂದಲೇ ಜನರನ್ನು ತಲುಪಿದ್ದು.

ಮಾಸ್ತಿ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕರ್ನಾಟಕದಲ್ಲಿ ಬರೋಬ್ಬರಿ 26 ವರ್ಷಗಳ ಕಾಲ, ಹಲವಾರು ಭಾಗಗಳಲ್ಲಿ ಜಿಲ್ಲಾಧಿಕಾರಿ ಆಗಿ ಕಾರ್ಯನಿರ್ವಹಿಸಿದ್ದರು. 1983ರಲ್ಲಿ ಮಾಸ್ತಿ ಅವರ ‘ಚಿಕ್ಕ‌ ವೀರ ರಾಜೇಂದ್ರ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಒಟ್ಟು 123 ಕ್ಕೂ ಹೆಚ್ಚು ಕನ್ನಡ ಹಾಗೂ 17 ಕ್ಕೂ ಹೆಚ್ಚು ಇಂಗ್ಲಿಷ್ ಕೃತಿಗಳನ್ನು ಬರೆದಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button