CinemaEntertainment
ಅಪರ್ಣಾ ಅಗಲಿಕೆಗೆ ಕಣ್ಣೀರಿಟ್ಟ ಮಜಾ ಟಾಕೀಸ್ ಕಲಾವಿದರು.
ಬೆಂಗಳೂರು: ಖ್ಯಾತ ಕನ್ನಡ ನಿರೂಪಕಿ ಶ್ರೀಮತಿ. ಅಪರ್ಣ ಅವರು ಕ್ಯಾನ್ಸರ್ ರೋಗದಿಂದ ನಿನ್ನೆ ರಾತ್ರಿ ಇಹಲೋಕವನ್ನು ತ್ಯಜಿಸಿದ್ದಾರೆ. ಇವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಂದ ಮಜಾ ಟಾಕೀಸ್ ಕಲಾವಿದರ ತಂಡ, ಅಪರ್ಣಾ ಅವರ ಅಗಲಿಕೆಯ ನೋವನ್ನು ತಾಳದೆ ಕಣ್ಣೀರು ಹಾಕಿದ್ದಾರೆ.
ಮಜಾ ಟಾಕೀಸ್‌ನ ಸಹಕಲಾವಿದರಾದ ಶ್ವೇತಾ ಚಂಗಪ್ಪ, ಮಂಡ್ಯ ರಮೇಶ್, ರೇಖಾ ಹಾಗೂ ಇತರರು ಅಪರ್ಣಾ ಅವರ ಕೊನೆಯ ದರ್ಶನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅಪರ್ಣಾ ಅವರ ಜೊತೆ ಕಳೆದ ಸುಂದರ ಕ್ಷಣಗಳನ್ನು ನೆನೆದು ಕಣ್ಣು ತುಂಬಿಕೊಂಡ ದೃಶ್ಯ ಎಲ್ಲರನ್ನೂ ಭಾವುಕರನ್ನಾಗಿ ಮಾಡಿತು.