Politics
ಮೋದಿ ಪ್ರಮಾಣವಚನಕ್ಕೆ ಬರಲಿದ್ದಾರಾ ಮಾಲ್ಡೀವ್ಸ್ ಪ್ರಧಾನಿ?
ನವದೆಹಲಿ: ನರೇಂದ್ರ ಮೋದಿಯವರ ಮೂರನೇ ಅವಧಿಯ ಸರ್ಕಾರದ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಜೂನ್ 09 ಕ್ಕೆ ನಿಗದಿಪಡಿಸಲಾಗಿದೆ. ಅಂದು ಗಣ್ಯರ ದಂಡೇ ಇರಲಿದೆ ಎಂದು ಹೇಳಲಾಗಿದೆ.
ಅತಿಥಿಗಳ ಪಟ್ಟಿಯಲ್ಲಿ ಮಾಲ್ಡೀವ್ಸ್ ಪ್ರಧಾನಿ ಮೊಹಮ್ಮದ್ ಮ್ಯೂಯಿಜ್ಜು ಅವರ ಹೆಸರು ಕೂಡ ಸೇರಿಸಲಾಗಿದೆ. ಇದು ಎಲ್ಲರಲ್ಲಿಯೂ ಆಶ್ಚರ್ಯ ಹುಟ್ಟಿಸಿದೆ. ಕಳೆದ ವರ್ಷ ‘ಇಂಡಿಯಾ ಔಟ್’ ಆಂದೋಲನ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮ್ಯೂಯಿಜ್ಜು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದರು. ಇದರೊಂದಿಗೆ ಮಾಲ್ಡೀವ್ಸ್ ಪ್ರವಾಸವನ್ನು ಭಾರತೀಯರು ಬಾಯ್ಕಾಟ್ ಮಾಡಿದ್ದರು. ಇದರಿಂದ ಬಿಲಿಯನ್ ಗಟ್ಟಲೆ ಆದಾಯ ಮಾಲ್ಡೀವ್ಸ್ ದೇಶದ ಕೈತಪ್ಪಿತ್ತು.
ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ, ಭಾರತದ ನೆರೆಯ ಏಳು ದೇಶಗಳನ್ನು ಆಮಂತ್ರಿಸಿದೆ. ಅದರಲ್ಲಿ ಮಾಲ್ಡೀವ್ಸ್ ಕೂಡ ಒಂದು. ಈ ಮೂಲಕ ಒಡಕು ಬಿದ್ದ ಸಂಬಂಧ ಮತ್ತೆ ಒಂದಾಗಲಿ ಎಂಬುದು ಆಶಯ.