Politics

ಪ್ರಧಾನಿಗೆ ದೀದಿ ಪತ್ರ: ಕೋತಿ ತಾನು ತಿಂದು, ಮೇಕೆಯ ಮೂತಿಗೆ ಒರೆಸುವ ಯತ್ನವೇ..?!

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರ ದೇಶಾದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಹತ್ಯೆಗಳ ಕುರಿತಾದ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಮಹಿಳಾ ಭದ್ರತೆಗಾಗಿ ಕಠಿಣ ಕೇಂದ್ರ ಕಾನೂನುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಪತ್ರದಲ್ಲಿ, ಪ್ರತಿ ದಿನ ಪ್ರಾಯೋಜಿತ 90 ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ ಎಂಬ ಭಯಾನಕ ದತ್ತಾಂಶಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭ, ಮಹಿಳೆಯರ ಭದ್ರತೆ ಮತ್ತು ದೇಶದ ಸಮಗ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಪ್ರಸ್ತಾವಿಸಿದ್ದಾರೆ, ಈ ರೀತಿಯ ಕೃತ್ಯಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಹಾಗೂ ವೇಗವಾದ ವಿಚಾರಣೆಗೆ ವೇದಿಕೆ ಒದಗಿಸುವ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

ಮಮತಾ ಅವರ ಪ್ರಕಾರ, “ನ್ಯಾಯ ದೊರಕಲು ವಿಚಾರಣೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸಬೇಕಾಗಿದೆ,” ಎಂದು ಅವರು ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಈ ಪತ್ರವು ದೇಶಾದ್ಯಾಂತ ಮಹತ್ವ ಪಡೆದುಕೊಂಡಿದ್ದು, ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಒತ್ತಾಯ ಕೇಳಿಬಂದಿದೆ. ಆದರೆ ತಮ್ಮ ಮನೆ ಅಂಗಳದಲ್ಲಿ ತಪ್ಪು ಇರುವಾಗ ಇನ್ನೊಬ್ಬರ ಮನೆಗೆ ಕೈ ಮಾಡುವ ಗುಣ ಇಲ್ಲಿ ಎದ್ದು ಕಾಣುತ್ತಿದೆ. ಕೋತಿ ತಾನು ತಿಂದು, ಮೇಕೆಯ ಮೂತಿಗೆ ಒರೆಸುವ ಯತ್ನ ಈ ಪತ್ರದ ಮೂಲಕ ಆಗಬಹುದೇ..?

Show More

Leave a Reply

Your email address will not be published. Required fields are marked *

Related Articles

Back to top button