Alma CornerSports

ವಿಶ್ವ ಕಪ್ ನ ರಿಯಲ್ ಹೀರೋ

ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಎಂದಾಗ ಪ್ರೇಕ್ಷಕರ ಕಣ್ಣೆದುರು ಬರುವ ಇಬ್ಬರು ವ್ಯಕ್ತಿಗಳೆಂದರೆ ಮೊದಲನೇದಾಗಿ ಕಪಿಲ್ ದೇವ್ ಎರಡನೆಯದಾಗಿ ಎಂ ಎಸ್ ಧೋನಿ ಆದರೆ ಭಾರತದ ಮೊದಲ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಓರ್ವ ವ್ಯಕ್ತಿಯನ್ನು ನಮ್ಮ ಇಂದಿನ ಜನರೇಶನ್ ಅವರು ಮರೆತಿದ್ದಾರೆ. ಅವರು ಯಾರೆಂದರೆ ಮೊಹಿಂದರ್ ಅಮರನಾಥ್ , ಇವರು 24 ಸೆಪ್ಟೆಂಬರ್ 1950 ರಂದು ಪಟಿಯಾಲದಲ್ಲಿ ಲಾಲಾ ಅಮರನಾಥ್ ಮತ್ತು ಕೈಲಾಶ್ ಕುಮಾರಿ ಗೆ ಜನಿಸಿದರು. ಇವರ ಕುಟುಂಬದಲ್ಲಿ ಇವರ ಸಹೋದರರು ಕ್ರಿಕೆಟ್ ಆಟಗಾರರಾಗಿದ್ದ ಕಾರಣ ಮೋಹಿಂದರ್ ಅವರಿಗೂ ಸಹ ಕ್ರಿಕೆಟ್ ನಲ್ಲಿ ಆಸಕ್ತಿ ಹುಟ್ಟಿ ಕ್ರಿಕೆಟ್ ಜಗತ್ತನ್ನು ಪ್ರವೇಶಿಸಿದರು.

ಮೊಹಿಂದರ್ 1969 ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೀಮ್-ಬೌಲಿಂಗ್ ಆಲ್ ರೌಂಡರ್ ಆಗಿ ಚೊಚ್ಚಲ ಪ್ರವೇಶ ಮಾಡಿದರು. ಮೊಹಿಂದರ್ ಅಮರನಾಥ್ 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಮ್ಮ ಪ್ರದರ್ಶನದಿಂದಲೆ ಹೆಸರುವಾಸಿಯಾಗಿದ್ದಾರೆ . ಅವರು ಫೈನಲ್ ಮತ್ತು ಸೆಮಿ-ಫೈನಲ್‌ನಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿಯನ್ನು ಪಡೆದರು. ಇವರು ವಿಶ್ವದಲ್ಲಿನ ವೇಗಿ ಬಾಲರ್ಗಳನ್ನು ದಂಡಿಸುವಲ್ಲಿ ಹೆಸರುವಾಸಿಯಾಗಿದ್ದರು. ತಮ್ಮ ಅಬ್ಬರದ ಬೌಲಿಂಗ್ ಮೂಲಕ ಬ್ಯಾಟ್ಸ್ಮನ್ ಗಳನ್ನು ಫೇವಿಲಿಯನ್ ಕಡೆಗೆ ಕಳುಹಿಸುತ್ತಿದ್ದರು.

1883ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಮೊಹಿಂದರ್ ಅವರು ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. ತಮ್ಮ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ಅವರ ತವರಿನಲ್ಲೇ ಮಣ್ಣುಮುಕ್ಕಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವನ್ನು 213 ರನ್ ಗೆ ಕಟ್ಟಿ ಹಾಕಲಾಯಿತು. ಮೋಹಿಂದರ್ ತಮ್ಮ ಬೌಲಿಂಗ್ ಮೂಲಕ 12 ಓವರ್ ಗೆ 27 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಬ್ಯಾಟಿಂಗ್ ನಲ್ಲಿ ಇವರು 92 ಎಸೆತಕ್ಕೆ 46 ರನ್ ಬಾರಿಸಿ ಭಾರತದ ಜಯದ ಹಾದಿಯನ್ನು ಸುಲಭಗೊಳಿಸಿದರು.

1983 ರ ವಿಶ್ವ ಕಪ್ ಫೈನಲ್ ನಲ್ಲಿ ಭಾರತ 54.4 ಓವರ್‌ಗಳಲ್ಲಿ 183 ರನ್ ಕಲೆ ಹಾಕಿತು. ವಿಶ್ವದ ಬಲಿಷ್ಠ ತಂಡವಾದ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 140 ರನ್ ಗೆ ಆಲ್ ಔಟ್ ಮಾಡುವ ಮೂಲಕ ಭಾರತ ಚೊಚ್ಚಲ ವಿಶ್ವಕಪ್ ಅನ್ನು ಮುಡಿಗಿರಿಸಿಕೊಂಡಿತು. ಈ ಪಂದ್ಯದಲ್ಲಿ ಮೋಹಿಂದರ್ ವೆಸ್ಟ್ ಇಂಡೀಸ್ ನ ವೇಗಿಗಳನ್ನು ಎದುರಿಸಿ ಸುಧೀರ್ಘ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಜೊತೆಗೆ ಏಳು ಓವರ್ ಗಳಲ್ಲಿ ಕೇವಲ 12 ರನ್ ನೀಡಿ ವೆಸ್ಟ್ ಇಂಡೀಸ್ 3 ಆಟಗಾರರನ್ನು ವಿಕೆಟ್ ಪಡೆದು ಭಾರತವನ್ನು ಜಯದ ಹಾದಿಯತ್ತ ಕರೆದೋಯ್ದರು.

ಮೋಹಿಂದರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಹೆಸರುವಾಸಿಯಾಗಿದ್ದಾರೆ. ಮೊಹಿಂದರ್ ಅಮರನಾಥ್ 69 ಟೆಸ್ಟ್ ಪಂದ್ಯಗಳಲ್ಲಿ 42.50 ಬ್ಯಾಟಿಂಗ್ ಸರಾಸರಿಯಲ್ಲಿ 11 ಶತಕ ಮತ್ತು 24 ಅರ್ಧಶತಕಗಳೊಂದಿಗೆ 4,378 ರನ್ ಗಳಿಸಿದರು ಮತ್ತು ತಲಾ 55.68 ರ ಬೌಲಿಂಗ್ ಸರಾಸರಿಯಲ್ಲಿ 32 ವಿಕೆಟ್ ಪಡೆದರು. 85 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ , ಅವರು 30.53 ಸರಾಸರಿಯಲ್ಲಿ 1,924 ರನ್‌ಗಳನ್ನು ಗಳಿಸಿದರು ಮತ್ತು 102 ರನ್‌ಗಳ ಗರಿಷ್ಠ ಸ್ಕೋರ್ ಮತ್ತು 42.84 ಸರಾಸರಿಯಲ್ಲಿ 46 ವಿಕೆಟ್‌ಗಳನ್ನು ಪಡೆದರು.


ಇವರು ತಮ್ಮ ಜೀವನದ ಉದ್ದಕ್ಕೂ ಅನೇಕ ಇಂಜುರಿಗಳನ್ನು ಎದುರಿಸಬೇಕಾಯಿತು. ಹಲವು ಬಾರಿ ತಲೆಗೆ ಬಾಲ್ ಬಿದ್ದು ಹೊಲಿಗೆ ಹಾಕಿಸಿಕೊಂಡಿದ್ದಾರೆ. ಅಂದಿನ ವೇಗಿ ಜೆಫ್ ಥಾಮಸನ್ ಅವರ ವಿರುದ್ಧ 10 ರನ್ ಗಳಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ.
ಇವರ ಈ ಧೈರ್ಯಗಳನ್ನು ವಿಶ್ವದ ಅನೇಕ ಆಟಗಾರರು ಹಾಡಿ ಹೊಗಳಿದ್ದಾರೆ.ಇವರು ತಮ್ಮ ನಿವೃತ್ತಿಯ ನಂತರ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿದರು. 1985ರಲ್ಲಿ ಕಬಿ ಆಜ್ಞಾಬಿ ದಿ ಸಿನಿಮಾ, 2016ರಲ್ಲಿ ಡಿಶುಮ್, 21ರಲ್ಲಿ 83 ಸಿನಿಮಾದಲ್ಲಿ ನಟನೆ ಮಾಡಿದರು. ಒಂಬತ್ತರ ದಶಕದ ಕೊನೆಯಲ್ಲಿ ಕ್ರಿಕೆಟ್ ವಿತ್ ಮೊಹಿಂದರ್ ಎಂಬ ಷೋವನ್ನು ಪ್ರಾರಂಭಿಸಿದರು ಹಾಗೂ ಅದರಲ್ಲಿ ಅನೇಕ ಆಟಗಾರರ ಇಂಟರ್ವ್ಯೂ ಮಾಡಿದರು.ಮೋಹಿಂದರ್ ಅಮರನಾಥ್ ತಮ್ಮ ಉತ್ತಮ ಆಟ ಹಾಗೂ ಧೈರ್ಯವಾಗಿ ಎದುರಾಳಿಯನ್ನು ಎದುರಿಸುವ ರೀತಿಯಿಂದ ಹೆಸರುವಾಸಿಯಾಗಿದ್ದಾರೆ. ಇವರು ಭಾರತ ಕ್ರಿಕೆಟ್ ಲೋಕ ದಲ್ಲಿ 20 ವರ್ಷಗಳ ಕಾಲ ರಾರಾಜಿಸಿದರು.

Show More

Leave a Reply

Your email address will not be published. Required fields are marked *

Related Articles

Back to top button