CinemaEntertainment
‘ಮ್ಯಾಂಗೋ ಪಚ್ಚ’: ಸುದೀಪ್ ಅಕ್ಕನ ಮಗನ ಭರ್ಜರಿ ಎಂಟ್ರಿಗೆ ಕಾಯ್ತಿದೆ ಸ್ಯಾಂಡಲ್‌ವುಡ್!
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿ! ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾದ ಟೈಟಲ್ ಮತ್ತು ಪ್ರೋಮೋ ಬಿಡುಗಡೆಯಾಗಿದೆ. ‘ಮ್ಯಾಂಗೋ ಪಚ್ಚ’ ಎಂಬ ವಿಶಿಷ್ಟ ಹೆಸರಿನ ಈ ಸಿನಿಮಾದ ಪ್ರೋಮೋ ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿದೆ.
ಮ್ಯಾಂಗೋ ಪಚ್ಚನ ಕಥೆ ಏನು?
ಪ್ರೋಮೋನಲ್ಲೇ ವಿಭಿನ್ನ ನಿರೂಪಣೆಯಿದ್ದು, ವಿದೇಶಿ ಲೇಡಿ ಒಬ್ಬಳು ಕ್ರೇಜಿ ಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್ಗೆ ಬರುತ್ತಾಳೆ. ಟೇಬಲ್ ಖಾಲಿ ಇದೆಯೇ ಎಂದು ಕೇಳಿದಾಗ, “ಅದು ಮ್ಯಾಂಗೋ ಪಚ್ಚನ ಟೇಬಲ್!” ಎಂದು ಹೇಳಲಾಗುತ್ತದೆ. ಈ ಪ್ರಸ್ತಾವನೆಯೊಂದಿಗೆ ಸಂಚಿತ್ ಖಡಕ್ ಲುಕ್ ಅನಾವರಣವಾಗುತ್ತದೆ.
ಚಿತ್ರತಂಡ ಮತ್ತು ವಿಶೇಷತೆಗಳು
- ನಾಯಕಿ: ಪೆಪೆ ಸಿನಿಮಾ ಖ್ಯಾತಿಯ ಕಾಜಲ್ ಕುಂದರ್
- ನಿರ್ದೇಶಕ: ವಿವೇಕ್ (ಇದು ಅವರೂ ಚೊಚ್ಚಲ ಸಿನಿಮಾ)
- ನಿರ್ಮಾಣ: ಕೆಆರ್‌ಜಿ ಸ್ಟುಡಿಯೋಸ್ & ಸುಪ್ರಿಯಾನ್ವಿ ಪ್ರೊಡಕ್ಷನ್ಸ್
- ಕಥೆ: 2001-2011ರ ಮೈಸೂರು ಕ್ರೈಂ ಥ್ರಿಲ್ಲರ್ ಇನ್‌ಸ್ಪೈರೇಶನ್
- ತಾರಾಗಣ: ಮಯೂರ್ ಪಟೇಲ್, ಬಿಗ್ ಬಾಸ್ ಫೇಮ್ ಹಂಸ, ಮಾಲಾಶ್ರೀ, ಜಯ್ (ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ)
- ಸಂಗೀತ: ಚರಣ್ ರಾಜ್
- ಛಾಯಾಗ್ರಹಣ: ಶೇಖರ್ ಚಂದ್ರ
ಸಂಚಿತ್ ಭರ್ಜರಿ ಎಂಟ್ರಿಗೆ ಅಭಿಮಾನಿಗಳ ಮೆಚ್ಚುಗೆ!
ಈಗಾಗಲೇ ಅಭಿಮಾನಿಗಳು ಪ್ರೋಮೋ ನೋಡಿ ಸಂಚಿತ್ ಅವರ ರಗಡ್ ಲುಕ್ ಹಾಗೂ ಪೆರ್ಫಾರ್ಮೆನ್ಸ್‌ಗೆ ಫಿದಾ ಆಗಿದ್ದಾರೆ. “ಸುದೀಪ್ ಕುಟುಂಬದಿಂದ ಮತ್ತೊಬ್ಬ ಬಿಗ್ ಸ್ಟಾರ್ ಹುಟ್ಟುತ್ತಿದ್ದಾನಾ?” ಎಂಬ ಕುತೂಹಲ ಹುಟ್ಟಿದೆ.