9 ಕಥೆಗಳು, 8 ನಿರ್ದೇಶಕರು, 1 ಸಿನೆಮಾ; ಮಲೆಯಾಳಂ ಮನೋರಥಂಗಳ್ ಚಿತ್ರದಲ್ಲಿ ಮಮ್ಮುಟ್ಟಿ – ಮೋಹನ್‌ಲಾಲ್.

ತಿರುವನಂತಪುರಂ: ಮಲಯಾಳಂ ಚಿತ್ರರಂಗದಿಂದ ಮೂಡಿ ಬರುತ್ತಿದೆ ಒಂದು ವಿಭಿನ್ನ ಸಿನಿಮಾ. ಮಲಯಾಳಂ ಅಚ್ಚುಮೆಚ್ಚಿನ ಬರಹಗಾರ, ಚಿತ್ರ ಕಥೆಗಾರ, ಹಾಗೂ ನಿರ್ದೇಶಕರಾದ ಎಂ.ಟಿ ವಾಸುದೇವನ್ ನಾಯರ್ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ, ಮನೋರಥಂಗಳ್ ಚಿತ್ರದ ಟ್ರೈಲರ್‌ನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರದ ವಿಶೇಷವೆಂದರೆ, ವಿಚಿತ್ರ 8 ನಿರ್ದೇಶಕರನ್ನು ಹಾಗೂ 9 ಕಥೆಗಳನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಮಲಯಾಳಂನ ಪ್ರಖ್ಯಾತ ನಟ ನಟಿಯರ ದಂಡೇ ಇದೆ.
ಮನೋರಥಂಗಳ್ ಚಿತ್ರದಲ್ಲಿ ಯಾರೆಲ್ಲ ನಟ-ನಟಿಯರು ನಟಿಸಿದ್ದಾರೆ?
ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮಿ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ಹಾಗೂ ಇತರೆ ಘಟಾನುಘಟಿ ತಾರಾಗಣವೇ ಈ ಚಿತ್ರದಲ್ಲಿದೆ.
ಯಾವಾಗ ಬಿಡುಗಡೆ ಆಗಲಿದೆ ಈ ಚಿತ್ರ?
ಈ ಚಿತ್ರವನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಲು ಚಿತ್ರ ತಂಡ ಯೋಚಿಸಿದೆ. ಚಿತ್ರವು ಮಲಯಾಳಂ ಸೇರಿದಂತೆ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆಯಾಗಲಿದೆ.
ಯಾವ ನಟರಿಗೆ ಯಾವ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದಾರೆ?
- ಮಲಯಾಳಂ ಚಿತ್ರರಂಗದ ಲಾಲೆಟ್ಟನ್ ಎಂದೇ ಖ್ಯಾತಿಯಾಗಿರುವ ಮೋಹನ್ ಲಾಲ್ ಅವರಿಗೆ ಪ್ರಿಯದರ್ಶನ್ ಅವರು ನಿರ್ದೇಶಿಸಿದ್ದಾರೆ. ಇವರ ಒಲ್ಲವುಮ್ ತೀರವುಮ್’ ಕಥೆ ಕಪ್ಪು ಬಿಳುಪು ಬಣ್ಣದಲ್ಲಿ ಮೂಡಿಬಂದಿದೆ.
- ಮಮ್ಮುಟಿ ಅವರಿಗೆ ರಂಜಿತ್ ಅವರು ನಿರ್ದೇಶನ ಮಾಡಿದ್ದು, ಇವರ ಕಥೆ ‘ಕಾಡುಗನ್ನವ ಒರು ಯಾತ್ರೆ ಕರಿಪ್ಪು’.
- ‘ಶಿಲಾಲಿಖಿತಂ’ ಪ್ರಿಯದರ್ಶನ್ ನಿರ್ದೇಶನದ ಈ ಕಥೆಯಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಮತ್ತು ಜಾಯ್ ಮ್ಯಾಥ್ಯೂ ನಟಿಸಿದ್ದಾರೆ.
- ಶ್ಯಾಮಪ್ರಸಾದ್ ನಿರ್ದೇಶನದ ‘ಕಜ್ಚಾ’ ಚಿತ್ರದಲ್ಲಿ ಪಾರ್ವತಿ ತಿರುವೋತ್ತು ಮತ್ತು ಹರೀಶ್ ಉತ್ತಮನ್ ನಟಿಸಿದ್ದಾರೆ.
- ‘ವಿಲ್ಪನಾ’ ಮಾಧೂ ಮತ್ತು ಆಸಿಫ್ ಅಲಿ ನಟಿಸಿರುವ ಕಥೆಯನ್ನು ಅಶ್ವತಿ ನಾಯರ್ ನಿರ್ದೇಶಿಸಿದ್ದಾರೆ.
- ಅಭಿನವ ಮಹೇಶ್ ನಾರಾಯಣನ್ ನಿರ್ದೇಶಿಸಿದ ಫಹಾದ್ ಫಾಸಿಲ್ ಮತ್ತು ಜರೀನಾ ಮೊಯ್ದು ಜೋಡಿ ‘ಶರ್ಲಾಕ್’ ಕಥೆಯಲ್ಲಿ ಕಾಣಿಸಿಕೊಂಡಿದೆ.
- ‘ಸ್ವರ್ಗಂ ತುರಕ್ಕುನ್ನ ಸಮಯ’ ಜಯರಾಜನ್ ನಾಯರ್ ನಿರ್ದೇಶನದಲ್ಲಿ ಕೈಲಾಶ್, ಇಂದ್ರನ್ಸ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್ ಮತ್ತು ಸುರಭಿ ಲಕ್ಷ್ಮಿ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ.
- ‘ಅಭ್ಯಾಮ್ ತೀಡಿ ವೀಂದುಂ’ ಸಿದ್ಧಿಕ್, ಇಶಿತ್ ಯಾಮಿನಿ ಮತ್ತು ನಜೀರ್ ಈ ಕಥೆಯಲ್ಲಿ ನಟಿಸಿದ್ದಾರೆ, ಸಂತೋಷ್ ಶಿವನ್ ನಿರ್ದೇಶಿಸಿದ್ದಾರೆ.
- ‘ಕಡಲ್‌ಕಾಟ್ಟು’ ರತೀಶ್ ಅಂಬಾಟ್ ನಿರ್ದೇಶನದ ಈ ಕಥೆಯಲ್ಲಿ ಇಂದ್ರಜಿತ್ ಮತ್ತು ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.