ಮೂರನೇ ದಿನಕ್ಕೆ ಪಾದಯಾತ್ರೆ: ಕಾಂಗ್ರೆಸ್ ಪಕ್ಷದ ವಿರುದ್ಧ ತೊಡೆತಟ್ಟಿರುವ ವಿರೋಧ ಪಕ್ಷಗಳು.

ಮೈಸೂರು: ವಿರೋಧ ಪಕ್ಷಗಳಾದಂತಹ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯತೀತ ಜನತಾದಳ ಒಗ್ಗೂಡಿ, ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯಾದ ‘ಮೈಸೂರು ಚಲೋ’, ಇದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ದಿನಾಂಕ 3 ರಂದು ಪ್ರಾರಂಭವಾಗಿದ್ದ ಈ ಪಾದಯಾತ್ರೆ ಬೆಂಗಳೂರಿನಿಂದ ಮೈಸೂರಿನವರೆಗೆ ಸಾಗಲಿದೆ.
ದಿನದಿಂದ ದಿನಕ್ಕೆ ರಾಜ್ಯ ಸರ್ಕಾರದ ನೆತ್ತಿಯ ಮೇಲೆ ತೂಗಾಡುತ್ತಿರುವ, ಹಗರಣಗಳ ಕತ್ತಿಗಳು ವಿರೋಧ ಪಕ್ಷಕ್ಕೆ , ಸರ್ಕಾರದ ವಿರುದ್ಧ ಖಡಕ್ ಆರೋಪಗಳನ್ನು ಮಾಡಲು ಭಾರಿ ಅವಕಾಶವನ್ನು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೆ ಅವರ ಪತ್ನಿಯವರ ಹೆಸರು ಉಲ್ಲೇಖವಾಗಿರುವ ಮುಡ ಹಗರಣ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸರ್ಕಾರದ ನಿಧಿಯನ್ನು ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಗಳಿಗೆ ಉಪಯೋಗಿಸಿದ್ದಾರೆ ಎಂಬ ಆರೋಪ, ಮಾಜಿ ಶಾಸಕರಾದ ನಾಗೇಂದ್ರ ಅವರ ವಾಲ್ಮೀಕಿ ನಿಗಮ ಹಗರಣ ಹೀಗೆ ಸಾಲು ಸಾಲು ಹಗರಣಗಳು ಕಾಂಗ್ರೆಸ್ ಸರ್ಕಾರಕ್ಕೆ ಉಸಿರುಗಟ್ಟಿಸುತ್ತಿದೆ.
ಒಂದು ಕಡೆ ವಿರೋಧ ಪಕ್ಷಗಳಾದಂತಹ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತು ಜನಜಾಗೃತಿ ಮೂಡಿಸುತ್ತಿದೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಕೋಟಿಗಟ್ಟಲೆ ರುಪಾಯಿಗಳ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಜನಾಂದೋಲನ ಯಾತ್ರೆಯನ್ನು ಕೈಗೊಂಡಿದೆ. ರಾಜ್ಯದ ಜನರ ಶೀತಕ್ಕೆ ಅಡ್ಡಿ ಬರುವ ಯಾವುದೇ ಭ್ರಷ್ಟಾಚಾರ ಹಗರಣಗಳನ್ನು ಹಾಗೆ ಬಿಡಕೂಡದು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕು, ಕರ್ನಾಟಕ ರಾಜ್ಯವು ಸುಭಿಕ್ಷವಾಗಿರಲು ಈ ಎಲ್ಲಾ ಆರೋಪ ಮತ್ತು ಪ್ರತ್ಯಾರೋಪಗಳ ಕೆಸರಾಟಕ್ಕೆ ಕೊನೆ ಸಿಗಬೇಕು.