ವಿಘ್ನೇಶ್ವರನ ವಿಸರ್ಜನೆ ವೇಳೆ ಭಾರೀ ವಿಘ್ನ: ಬೆಳಗಾವಿಯಲ್ಲಿ ಮೂವರಿಗೆ ಚಾಕುವಿನಿಂದ ಇರಿತ!
ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಗಲಾಟೆ ಪರಿಣಾಮ ಮೂವರಿಗೆ ಚಾಕುವಿನಿಂದ ಇರಿತಗೊಳಿಸಲಾಗಿದೆ ಎಂದು ಸೆಪ್ಟೆಂಬರ್ 18ರಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಮೆರವಣಿಗೆಯ ಸಮಯದಲ್ಲಿ ಅಲ್ಲ, ಆದರೆ ಸಿವಿಲ್ ಆಸ್ಪತ್ರೆ ಸಮೀಪದಲ್ಲಿ ನಡೆದಿದೆ ಎನ್ನಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತ ಐಡಾ ಮಾರ್ಟಿನ್ ಈ ಘಟನೆ ಕುರಿತು ಮಾತನಾಡಿ, “ಮೆರವಣಿಗೆಯಲ್ಲಿಯೇ ಗಲಾಟೆ ನಡೆಯಿತು, ಆದರೆ ನಾವು ಇಬ್ಬರಿಗೂ ಎಚ್ಚರಿಕೆ ನೀಡಿ, ಅವರನ್ನು ಮೆರವಣಿಗೆಯಿಂದ ಹೊರಹಾಕಿದ್ದೇವೆ. ಬಳಿಕ ಮೆರವಣಿಗೆ ಮುಂದೆ ಸಾಗಿತು” ಎಂದು ತಿಳಿಸಿದರು.
ಹಳೆಯ ವೈಷಮ್ಯದಿಂದ ಗಲಾಟೆ ತೀವ್ರತೆ ಪಡೆದಿದೆಯೆ?
ಈ ಘಟನೆಗೆ ಹಳೆಯ ವೈಷಮ್ಯವೇ ಕಾರಣ ಎನ್ನುವುದು ಪ್ರಾಥಮಿಕ ಮಾಹಿತಿಯಾಗಿದೆ. ಐಡಾ ಮಾರ್ಟಿನ್ ಅವರು, “ವಿಶೇಷವಾಗಿ 6-7 ತಿಂಗಳ ಹಿಂದೆ ನಡೆದ ಗಲಾಟೆಯಿಂದಾಗಿ ಇದು ನಡೆದಿರುವ ಸಾಧ್ಯತೆ ಇದೆ” ಎಂದರು. ಆದರೆ, ಈ ಬಗ್ಗೆ ಇನ್ನೂ ತನಿಖೆ ಮುಂದುವರಿಯುತ್ತಿದೆ.
ಕ್ಷುಲ್ಲಕ ಕಾರಣದಿಂದ ಗಲಾಟೆ ವಿಕೋಪಕ್ಕೆ ತಿರುಗಿದಿದೆಯೆ?
ಪೋಲಿಸ್ ಆಯುಕ್ತರು ಹೇಳುವುದೇನೆಂದರೆ, “ಮೆರವಣಿಗೆಯಲ್ಲಿ ನೃತ್ಯ ಮಾಡುವಾಗ ಅಡ್ಡ ಬಂದ ವ್ಯಕ್ತಿಯೊಬ್ಬರ ಬಳಿ ಕ್ಷುಲ್ಲಕ ಕಾರಣದಿಂದ ಗಲಾಟೆ ಉಂಟಾಯಿತು” ಎಂದು ಅವರು ವಿವರಿಸಿದರು.
ಆರೋಪಿಗಳು ಶೀಘ್ರವೇ ಬಂಧನ:
ಚಾಕು ಇರಿತಕ್ಕೊಳಗಾದವರ ಗಾಯಗಳು ಚಿಕ್ಕದಾಗಿದೆ ಎಂದು ಆಯುಕ್ತರು ತಿಳಿಸಿದರು. “ಚಾಕು ಇರಿತಕ್ಕೆ ಸಂಬಂಧಿಸಿದಂತೆ ಆರೋಪಿ ಯಾರು ಎಂದು ನಮಗೆ ಗೊತ್ತಾಗಿದೆ, ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಅವರು ಭರವಸೆ ನೀಡಿದ್ದಾರೆ. ಗಾಂಜಾ ಸೇವನೆಯಿಂದ ಗಲಾಟೆ ನಡೆದಿದೆಯೆ ಎಂಬ ವಿಚಾರ ಸೂಕ್ತ ಪರೀಕ್ಷೆಗಳ ಬಳಿಕ ತಿಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.