ಡಿಸೆಂಬರ್ 25ಕ್ಕೆ “ಮಾಕ್ಸ್” ಅವತಾರ: ಈ ಚಿತ್ರ ನೋಡಲು ಆಸೆ ಪಟ್ಟಿದ್ದರಂತೆ ಕಿಚ್ಚನ ತಾಯಿ..!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ “ಮ್ಯಾಕ್ಸ್” ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಚಿತ್ರ ಡಿಸೆಂಬರ್ 25ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ. ಕಿಚ್ಚ ಕ್ರಿಯೇಷನ್ಸ್ ಹಾಗೂ ವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರವು, ಕಲೈಪುಲಿ ಎಸ್. ಧಾನು ಅವರ ಪ್ರಥಮ ಕನ್ನಡ ಚಿತ್ರವಾಗಿದೆ.
ಕಥೆಯ ಹಿಂದೇನಿದೆ?:
“ಮ್ಯಾಕ್ಸ್” ಒಂದು ರಾತ್ರಿಯ ಕಥೆಯನ್ನು ಆಧರಿಸಿದ ಎಮೋಷನಲ್ ಆಕ್ಷನ್ ಚಿತ್ರ. ಚಿತ್ರದಲ್ಲಿ ಕಿಚ್ಚ ಸುದೀಪ್, “ಅರ್ಜುನ್ ಮಹಾಕ್ಷಯ್” ಎಂಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಅರ್ಜುನ್” ಎಂದು ಕರೆಯುವ ಬದಲು ಎಲ್ಲರೂ “ಮ್ಯಾಕ್ಸ್” ಎಂದು ಕರೆಯುತ್ತಾರೆ. ಚಿತ್ರವು ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಿಸಲಿದೆ ಎಂಬ ನಿರೀಕ್ಷೆ ಇದೆ.
ನಾಯಕನ ವಿಶೇಷ ಹೇಳಿಕೆ:
ಪತ್ರಿಕಾಗೋಷ್ಠಿಯಲ್ಲಿ ಸುದೀಪ್, “ವಿಜಯ್ ಕಾರ್ತಿಕೇಯ ಅವರ ಕಥೆಯನ್ನು ಕೇಳುವ ಮೊದಲೇ ಅದನ್ನು ಒಪ್ಪಿದ್ದೆ. ಈ ಕಥೆಯನ್ನು ಇನ್ನಷ್ಟು ಚರ್ಚೆಮಾಡಿ ಗಟ್ಟಿಯಾಗಿ ರೂಪಿಸಿದ್ದೇವೆ. ನಮ್ಮ ತಾಯಿ ಈ ಚಿತ್ರವನ್ನು ನೋಡಲು ಆಸೆಪಟ್ಟಿದ್ದರು, ಅವರ ಆಶೀರ್ವಾದ ನಮ್ಮೊಂದಿಗೆ ಇದೆ,” ಎಂದು ಭಾವನಾತ್ಮಕವಾಗಿ ಹೇಳಿದ್ರು.
ಚಿತ್ರೀಕರಣದ ಸಂಕಷ್ಟ:
ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಬೆಂಕಿ ಮತ್ತು ಧೂಳಿನ ಮಧ್ಯೆ ಕಷ್ಟಪಟ್ಟು ಚಿತ್ರಣ ಮಾಡಿದದ್ದಾಗಿ ಸುದೀಪ್ ವರ್ಣಿಸಿದರು. “ಚಿತ್ರದ ವೇಗ ತುಂಬಾ ಇಷ್ಟವಾಯಿತು, ಇದು ಅನಗತ್ಯ ಸೀನ್ ಗಳನ್ನು ತಪ್ಪಿಸಿದೆ,” ಎಂದರು.
ನಿರ್ಮಾಪಕರ ಮಾತು:
ಕಲೈಪುಲಿ ಎಸ್. ಧಾನು, “ಸುದೀಪ್ ಅವರು ನನ್ನ ಕನ್ನಡ ಚಿತ್ರದ ನಾಯಕನಾಗಿದ್ದು ದೊಡ್ಡ ಗೌರವವಾಗಿದೆ. ‘ಮ್ಯಾಕ್ಸ್’ ಕಾದು ನೋಡಬೇಕು,” ಎಂದು ಹೇಳಿದರು.
ನಿರ್ದೇಶಕರ ನೋಟ:
ವಿಜಯ್ ಕಾರ್ತಿಕೇಯ ಅವರ ಪ್ರಕಾರ, “ಮ್ಯಾಕ್ಸ್” ಒಂದು ಆಧುನಿಕ ಆಕ್ಷನ್ ಕಥಾಹಂದರ ಹೊಂದಿದ್ದು, ಸುದೀಪ್ ಅವರ ಅದ್ಭುತ ಅಭಿನಯ ಈ ಚಿತ್ರವನ್ನು ಇನ್ನಷ್ಟು ಮೇಲೆ ತರುತ್ತದೆ.”
ಚಿತ್ರೀಕರಣ ತಂಡ:
ಅಜನೀಶ್ ಲೋಕನಾಥ್ (ಸಂಗೀತ), ಶೇಖರ್ ಚಂದ್ರ (ಛಾಯಾಗ್ರಹಣ), ಚೇತನ್ ಡಿ’ಸೋಜ (ಸಾಹಸ), ಮತ್ತು ಶಿವಕುಮಾರ್ (ಕಲಾ ನಿರ್ದೇಶನ) ಅವರ ಶ್ರಮದಿಂದ ಈ ಚಿತ್ರ ವೈವಿಧ್ಯತೆಯನ್ನು ತಲುಪಿದೆ.
ಪ್ರೇಕ್ಷಕರ ಕಾತುರತೆ:
“ಮ್ಯಾಕ್ಸ್” ಚಿತ್ರ ಕಿಚ್ಚನ ಅಭಿಮಾನಿಗಳಿಗೆ ಮತ್ತೊಂದು ಉತ್ಸವದಂತೆ, ಆಕಾಶಕ್ಕೆ ಏರಿದೆ ನಿರೀಕ್ಷೆ. “ಅರ್ಜುನ್ ಮಹಾಕ್ಷಯ್” ಹೇಗೆ “ಮ್ಯಾಕ್ಸ್” ಆಗುತ್ತಾನೆ? ಇದನ್ನು ಕಣ್ತುಂಬಿಕೊಳ್ಳಲು ಡಿಸೆಂಬರ್ 25ರ ತನಕ ಕಾಯಬೇಕಾಗಿದೆ!