Politics
ಮತ್ತೆ ಸುದ್ದಿಗೆ ಬಂದ ‘ಮೆಲೋಡಿ’
ನವದೆಹಲಿ: ಇಟಲಿ ದೇಶದ ಪ್ರಧಾನಿ ಮೆಲೋನಿ ಹಾಗೂ ಮೋದಿ ಅವರದ್ದು ಎಷ್ಟು ನಿಕಟ ಸ್ನೇಹ ಎಂಬುದು ಎಲ್ಲರಿಗೂ ತಿಳಿದಿದೆ. ಜಿ-20 ಶೃಂಗ ಸಭೆಯಲ್ಲಿ ಇವರಿಬ್ಬರು ಸೇರಿ ತೆಗೆದುಕೊಂಡ ಸೆಲ್ಫಿ ವೈರಲ್ ಆಗಿತ್ತು. ಮೆಲೋನಿ ಅವರು ಈ ಚಿತ್ರಕ್ಕೆ ‘ಮೆಲೋಡಿ’ ಎಂಬ ಶೀರ್ಷಿಕೆ ನೀಡಿದ್ದರು. ಈಗ ಅದೇ ಚಿತ್ರ ಮತ್ತೆ ವೈರಲ್ ಆಗಿದೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಂದಿದೆ. ಬಿಜೆಪಿ ಬಹುಮತ ಹೊಂದಿರದೆ ಇದ್ದರೂ ಸಹ, ಎನ್‌ಡಿಎ ಮೈತ್ರಿಕೂಟ ಜಯಭೇರಿ ಸಾಧಿಸಿದೆ. ಈ ಕುರಿತು ಮೆಲೋಡಿ ಅವರು ಮೋದಿಯವರಿಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.