CinemaEntertainment
ಹೊಸ ಲುಕ್‌ನಿಂದ ಲಕ್ ಕುದುರಿಸಿಕೊಂಡ ಮಿತ್ರ.
ಬೆಂಗಳೂರು: ಹಾಸ್ಯ ಕಲಾವಿದನಾಗಿ ಜನರನ್ನು ಹಾಸ್ಯದ ಕಡಲಲ್ಲಿ ಮೈಮರೆಯಿಸಿದ, ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಮಿತ್ರ, ಈಗ ಬಹು ಬೇಡಿಕೆಯ ಖಳನಟನಾಗಿ ಮಾರ್ಪಾಡಾಗಿದ್ದಾರೆ. ಹೇಗೆ ಮಿತ್ರ ಆವರ ಲುಕ್ ಬದಲಾಯಿತು? ಖಳನಟನಾಗಿ ಅಭಿನಯಿಸಿದ ಚಿತ್ರಗಳು ಯಾವುವು? ಮಿತ್ರ ಅವರ ಮುಂದಿನ ನಡೆ ಯಾವುದು? ಎಂಬ ಬಗ್ಗೆ ತಿಳಿಯೋಣ.
ಪ್ರಜ್ವಲ್ ದೇವರಾಜ್ ಅಭಿನಯದ, ಬಹು ನಿರೀಕ್ಷಿತ ಚಿತ್ರ ‘ಕರಾವಳಿ’ಯಲ್ಲಿ ಮಿತ್ರ ಅವರು ಖಳನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಇದಕ್ಕಾಗಿ ತಮ್ಮ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಖದರ್ ದಾಡಿ, ಮೀಸೆ ಹಾಗೂ ಹೇರ್ ಸ್ಟೈಲ್ ಮೂಲಕ ತೆರೆಯ ಮೇಲೆ ಅಬ್ಬರಿಸಲು ಮಿತ್ರ ರೆಡಿ ಆಗಿದ್ದಾರೆ. ಇವರ ಈ ಲುಕ್‌ನ್ನು ವಿನ್ಯಾಸ ಮಾಡಿರುವುದು ಕಾಲಿವುಡ್ ಸ್ಟೈಲಿಷ್ ಕಣ್ಮಣಿ.
ಮಿತ್ರ ಅವರ ಈ ಲುಕ್ ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಿಗೆ ಖಳನಾಯಕನನ್ನಾಗಿ ಮಿತ್ರ ಅವರನ್ನು ಆಯ್ಕೆ ಮಾಡಿದೆ. ಅದೇ ರೀತಿ ತಮಿಳು ಚಿತ್ರಕ್ಕೆ ಸಹ ಮಿತ್ರ ವಿಲನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಹೊಸ ಲುಕ್ ಮಿತ್ರ ಅವರಿಗೆ ಲಕ್ ತಂದಿದೆ.