“ಮೋದಿ ಒಬ್ಬರು ಸ್ಪೂರ್ತಿದಾಯಕ ನಾಯಕ”- ಆಸ್ಟ್ರೇಲಿಯಾ ಮಾಜಿ ಪ್ರಧಾನಿ.
ಆಸ್ಟ್ರೇಲಿಯಾ ದೇಶದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಸ್ನೇಹಕ್ಕೆ ಹತ್ತರಲ್ಲಿ ಹತ್ತು ಅಂಕವನ್ನು ನೀಡಿದ್ದಾರೆ. ‘”ಉಭಯ ದೇಶಗಳು ಅನೇಕ ಸಾಮಾನ್ಯ ವಿಷಯಗಳನ್ನು ಹೊಂದಿವೆ – ಕ್ರಿಕೆಟ್ ಮೇಲಿನ ಪ್ರೀತಿ, ಕಾನೂನು ಮತ್ತು ಪ್ರಜಾಪ್ರಭುತ್ವ – ಮತ್ತು ನಮ್ಮ ಸ್ನೇಹವು “ಹತ್ತರಲ್ಲಿ ಹತ್ತು”. ಎಂದು ಹೇಳಿದ್ದಾರೆ.
“ಆದರೆ ನಾವು ಸಾಕಷ್ಟು ವ್ಯಾಪಾರ ಮಾಡುವುದಿಲ್ಲ”. ಎಂದೂ ಸಹ ಹೇಳಿದ್ದಾರೆ. ಆಸ್ಟ್ರೇಲಿಯಾ ಈ ಹಿಂದೆ ಚೀನಾವನ್ನು ಅತಿ ದೊಡ್ಡ ಮಾರುಕಟ್ಟೆಯಾಗಿ ನೋಡುತ್ತಿತ್ತು. ಆದರೆ ಕೋವಿಡ್ ನಂತರ ಹಲವಾರು ಭಿನ್ನಾಭಿಪ್ರಾಯಗಳಿಂದ ಈ ಎರಡೂ ದೇಶಗಳ ವ್ಯಾಪಾರ ವಹಿವಾಟು ಅಂದುಕೊಂಡಷ್ಟು ನಡೆಯುತ್ತಿಲ್ಲ.
ಇದೇ ಬೆನ್ನಲ್ಲೇ ಭಾರತದತ್ತ ಮುಖ ಮಾಡಿದ ಆಸ್ಟ್ರೇಲಿಯಾ, ಭಾರತದೊಂದಿಗೆ ಭಾರತ-ಆಸ್ಟೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದ ಡಿಸೆಂಬರ್ 22, 2022ರಂದು ಕಾರ್ಯರೂಪಕ್ಕೆ ಬಂದರೂ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಅಷ್ಟೇನು ಹೇಳಿಕೊಳ್ಳುವ ವ್ಯಾಪಾರ ವಹಿವಾಟು ನಡೆದಿಲ್ಲ.
ಎಲೆಕ್ಟ್ರಿಕಲ್ ವಾಹನಗಳು ನಮ್ಮ ಮುಂದಿನ ಭವಿಷ್ಯ ಎಂದು ತಿಳಿದಿರುವ ಭಾರತಕ್ಕೆ ಆಸ್ಟ್ರೇಲಿಯಾದ ಸ್ನೇಹ ಅತಿ ಮುಖ್ಯ. ಎಲೆಕ್ಟ್ರಿಕಲ್ ವಾಹನಗಳಿಗೆ ಉಪಯೋಗಿಸುವ ಬ್ಯಾಟರಿಗಳ ತಯಾರಿಕೆಗೆ ಮುಖ್ಯವಾಗಿ ಬೇಕಿರುವುದು ಲಿಥಿಯಂ. ಆಸ್ಟ್ರೇಲಿಯಾ ವಿಶ್ವದಲ್ಲಿ ಸ್ಪೊಡುಮಿನ್ ಖನಿಜದ ರೂಪದಲ್ಲಿ ಲಿಥಿಯಂನ್ನು ಉತ್ಪಾದಿಸುವ ದೇಶಗಳಲ್ಲಿಯೇ ಅತಿದೊಡ್ಡ ದೇಶವಾಗಿದೆ. ಇದರ ಸದುಪಯೋಗವನ್ನು ಭಾರತ ಪಡೆದುಕೊಳ್ಳಬಹುದು.
ಇದೇ ಸಂದರ್ಭದಲ್ಲಿ ಮಾಲ್ಕಮ್ ಟರ್ನ್ಬುಲ್ ಅವರು ಪ್ರಧಾನಿ ಮೋದಿಯವರನ್ನು ಸ್ಪೂರ್ತಿದಾಯಕ ನಾಯಕ ಎಂದು ಹೊಗಳಿದ್ದಾರೆ. ವಿಶ್ವಕ್ಕೆ ಅವರು ಮಾದರಿ ಎಂದು ಪ್ರಶಂಸಿಸಿದ್ದಾರೆ.