Politics
ಮತದಾರರ ತಿರ್ಮಾನ ಮೂರನೇ ಬಾರಿ ಮೋದಿ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟಕ್ಕೆ ವಿಜಯವನ್ನು ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷವು ಈ ಲೋಕಸಭೆ ಚುನಾವಣೆಯಲ್ಲಿ ಅಂದುಕೊಂಡಷ್ಟು ಸ್ಥಾನಗಳನ್ನು ಗಳಿಸಲು ಶಕ್ತವಾಗಿಲ್ಲ. ಆದರೂ ಸಹ ಎನ್‌ಡಿಎ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
“ಇಂದಿನ ಗೆಲುವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯವಾಗಿದೆ” ಎಂದು ಮೋದಿಯವರು ಮಂಗಳವಾರ ತಮ್ಮ ಪಕ್ಷದ ಪ್ರಧಾನ ಕಛೇರಿಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದರು, ಭಾರತೀಯ ಮತದಾರರು ತಮ್ಮ ಪಕ್ಷ ಮತ್ತು ಅವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎರಡರಲ್ಲೂ ಅಗಾಧವಾದ ನಂಬಿಕೆಯನ್ನು ತೋರಿಸಿದ್ದಾರೆ” ಎಂದು ದೃಢಪಡಿಸಿದರು.
ದೇಶದ ಎಲ್ಲರ ಚಿತ್ತ ದೆಹಲಿಯತ್ತ ಆಗಿದ್ದರು ಕೂಡ, ಪ್ರಾದೇಶಿಕ ಪಕ್ಷಗಳಾದಂತಹ ಜೆಡಿಯು ಹಾಗೂ ಟಿಡಿಪಿ ಗಳ ಅಂತಿಮ ನಿರ್ಣಯದಿಂದ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.