Politics
ಸಂವಿಧಾನಕ್ಕೆ ತಲೆಬಾಗಿದ ಮೋದಿ.
ನವದೆಹಲಿ: ಚುನಾವಣಾ ಫಲಿತಾಂಶದ ನಂತರ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ಎನ್‌ಡಿಎ ಮಿತ್ರ ಪಕ್ಷಗಳು ಸಂಸದೀಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಎನ್‌ಡಿಎ ನಾಯಕರು ಉಪಸ್ಥಿತರಿದ್ದರು.
ಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ನಮ್ಮ ದೇಶದ ಸಂವಿಧಾನದ ಮೂಲ ಕೃತಿಗೆ ನಮಸ್ಕರಿಸಿ, ನಂತರ ಅದನ್ನು ಹಣೆಗೆ ಒತ್ತಿಕೊಂಡರು. ಪ್ರಧಾನಿ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಬೇಕು. ಯಾರೂ ಕೂಡ ಸಂವಿಧಾನಕ್ಕಿಂತ ಮೇಲೆ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ.