Politics

ಮೋದಿ ಸರ್ಕಾರದಿಂದ ಬಿಗ್ ಬ್ಯಾನ್: 400 ಚೀನಾ ಕಂಪನಿಗಳಿಗೆ ಭಾರತದಲ್ಲೀಗ ನಿರ್ಬಂಧ!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶದ 400 ಚೀನೀ ಕಂಪನಿಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ. ಈ 400 ಚೀನೀ ಕಂಪನಿಗಳು ಆನ್‌ಲೈನ್ ಉದ್ಯೋಗಗಳು ಮತ್ತು ಆನ್‌ಲೈನ್ ಸಾಲಗಳ ಸಂಬಂಧ ವಂಚನೆ ನಡೆಸಿದ ಆರೋಪಕ್ಕೆ ಗುರಿಯಾಗಿವೆ. ಇವು ಸಾಲಗಾರರಿಗೆ ಕಿರುಕುಳ ನೀಡುವುದು ಸೇರಿದಂತೆ ವಿವಿಧ ಆರೋಪಗಳಿಗೆ ಒಳಗಾಗಿವೆ.

ಈ ಕಂಪನಿಗಳ ವಿಳಾಸಗಳು ಕೂಡ ತಪ್ಪಾಗಿ ನೀಡಲಾಗಿದೆ ಎಂಬುದು ತನಿಖೆಯ ಭಾಗವಾಗಿ ಬೆಳಕಿಗೆ ಬಂದಿದೆ. 17 ರಾಜ್ಯಗಳಲ್ಲಿ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೋದಿಯವರ ಸರ್ಕಾರ ಮುಂದಾಗಿದೆ.

ಈ ಕ್ರಮವು ದೇಶದಲ್ಲಿ ಬದಲಾವಣೆ ತರುತ್ತಿದ್ದು, ವಂಚನೆಗೊಳಗಾದ ಜನರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನವಾಗಿದೆ. ಇದು ಮೋದಿಯವರ ಸರ್ಕಾರದ ದೊಡ್ಡ ಹೆಜ್ಜೆಯಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button