
ವೆಲ್ಲೂರು: ಏಪ್ರಿಲ್ 9ರಿಂದ ತಮಿಳುನಾಡಿನಲ್ಲಿ ಅಭೂತಪೂರ್ವ ರೋಡ್ ಶೋ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಡಿಎಂಕೆ ಪಕ್ಷವನ್ನು ಹೋದ ಕಡೆಯಲ್ಲೆಲ್ಲ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಚೆನ್ನೈನಿಂದ ತಮ್ಮ ಗಮನವನ್ನು ಕೊಂಗನಾಡಿನತ್ತ ಹರಿಸಿರುವ ಮೋದಿಯವರು, ಪ್ರಾದೇಶಿಕ ಪಕ್ಷಗಳ ಪ್ರಭಾವ ಹೊಂದಿರುವ ತಮಿಳುನಾಡಿನಲ್ಲಿ ತೊಡೆ ತಟ್ಟಿದ್ದಾರೆ.
ಇಂದು ನರೇಂದ್ರ ಮೋದಿಯವರು, ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ, ಕೇಂದ್ರ ಮಂತ್ರಿ, ಶ್ರೀ. ಎಲ್. ಮುರುಗನ್, ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶ್ರೀ. ಕೆ. ಅಣ್ಣಾಮಲೈ, ತಿರುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶ್ರೀ. ಎ.ಪಿ. ಮುರುಗನಂದಮ್, ಪೊಳ್ಳಚ್ಚಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶ್ರೀ. ಕೆ. ವಸಂತ ರಾಜನ್ ಹಾಗೂ ಇತರರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ವಿರುದ್ಧ ಹರಿಹಾಯ್ದ ಮೋದಿಯವರು, “ಡಿಎಂಕೆ ಪಕ್ಷ ಭ್ರಷ್ಟಾಚಾರದ ಕಾಪಿರೈಟ್ ಹಕ್ಕನ್ನು ಹೊಂದಿದೆ. ಅವರ ಪೂರ್ತಿ ಕುಟುಂಬ ತಮಿಳುನಾಡನ್ನು ಕೊಳ್ಳೆ ಹೊಡೆದಿದೆ.” ಎಂದು ವೆಲ್ಲೂರು ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.