Sports
ಚಾಂಪಿಯನ್ಸ್‌ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.
ನವದೆಹಲಿ: ಹಲವು ದಿನಗಳ ನಂತರ ಭಾರತೀಯ ಕ್ರಿಕೆಟ್ ತಂಡ ತನ್ನ ತವರನ್ನು ತಲುಪಿದೆ. ಇಂದು ಬೆಳಗ್ಗೆ ನವದೆಹಲಿ ತಲುಪಿದ ತಂಡ, ದೆಹಲಿಯ ಚಾಣಕ್ಯಪುರಿಯಲ್ಲಿ ಇರುವ ಪ್ರತಿಷ್ಠಿತ ಪಂಚತಾರ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದಿದ್ದರು. ಟಿ-20 ವಿಶ್ವಕಪ್ ಟ್ರೋಫಿಯನ್ನು ಎರಡನೇ ಬಾರಿ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು.
ದೇಶದ ಜನತೆಯ ಪರವಾಗಿ ಪ್ರಧಾನಿ ಟೀಮ್ ಇಂಡಿಯಾಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ರೋಫಿಯೊಂದಿಗೆ ಪ್ರಧಾನಿ ಹಾಗೂ ತಂಡದ ಸದಸ್ಯರು ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪ್ರಧಾನಿ ಭೇಟಿ ವೇಳೆ ವಿಭಿನ್ನ ವಿನ್ಯಾಸದ ಜೆರ್ಸಿಯನ್ನು ಭಾರತ ತಂಡದ ಸದಸ್ಯರು ಧರಿಸಿದ್ದರು. ಇದರ ಮೇಲೆ ‘ಚಾಂಪಿಯನ್ಸ್’ ಎಂದು ಬರೆದಿತ್ತು.
ತದನಂತರ ಕೆಲವು ಸಮಯ ಮೋದಿಯವರು ಮಾತುಕತೆ ನಡೆಸಿದರು. ಈ ಸಮಯದಲ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಪ್ರಧಾನಿಯವರೊಂದಿಗೆ ಟೀಮ್ ಇಂಡಿಯಾ ಮೆಲುಕು ಹಾಕಿತು.